ಜೆಡಿಎಸ್‌ನವರು ಕಾಂಗ್ರೆಸ್ ಪರ ವೋಟ್ ಕೇಳ್ತಿದ್ದಾರೆ: ಸಿಟಿ ರವಿ ಆರೋಪ

ನ್ಯಾಯವಾಗಿ ಜೆಡಿಎಸ್‌ನವ್ರು ಅವರ ಅಭ್ಯರ್ಥಿ ಪರ ಮುತ ಕೇಳಬೇಕು,ಆದರೆ  ಜೆಡಿಸ್‌ ಎಮ್‌ಎಲ್‌ಎ ವೋಟ್‌ ಕೇಳುತ್ತಿರುವುದು ಕಾಂಗ್ರೆಸ್‌ಗೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
 

Share this Video
  • FB
  • Linkdin
  • Whatsapp

ನ್ಯಾಯವಾಗಿ ಜೆಡಿಎಸ್‌ನವ್ರು ಅವರ ಅಭ್ಯರ್ಥಿ ಪರ ಮುತ ಕೇಳಬೇಕು,ಆದರೆ ಜೆಡಿಸ್‌ ಎಮ್‌ಎಲ್‌ಎ ವೋಟ್‌ ಕೇಳುತ್ತಿರುವುದು ಕಾಂಗ್ರೆಸ್‌ಗೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಮಾಧ್ಯಮದ ಜತೆ ಮಾತನಾಡಿದ ಅವರು, ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್​, ಜೆಡಿಎಸ್ ಮೈತ್ರಿ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಇದು ರಾಜಕೀಯ ವ್ಯಭಿಚಾರನಾ ಎಂದು ಪ್ರಶ್ನಿಸಿದರು. ನಾನು ಒಕ್ಕಲಿಗ ಮಗನಲ್ವಾ..? ರೈತನ ಮಗನಲ್ವಾ ನಾನು ರಾಜಕಾರಣದಲ್ಲಿ ಬೆಳೆಯಬಾರಾದಾ .. ಹೀಗೆ ರಾಜಕೀಯ ಪಕ್ಷಗಳು ಮೈತ್ರಿ ಮಾಡಿಕೊಂಡರೆ ಇದು ಯಾವ ಸೀಮೆ ನ್ಯಾಯ. ತಾಳಿ ಕಟ್ಟಿ ಸಂಸಾರ ಮಾಡಿದ್ರೆ ಸಂಸಾರಸ್ಥರು ಅಂತಾರೆ ಈ ಹೊಂದಾಣಿಕೆಗೆ ಏನಂತಾರೆ ಎಂದು ಕಿಡಿಕಾರಿದರು. 

Related Video