Watch Video: ಬದಲಾಗಲಿದೆಯಾ ಬೆಂಗಳೂರು ಗ್ರಾಮಾಂತರದ ಬಲಾಬಲ..? ಇದ್ದ 1 ಕ್ಷೇತ್ರವನ್ನೂ ಕಳೆದುಕೊಳ್ಳಲಿದೆಯಾ ಕಾಂಗ್ರೆಸ್..?
ಏನ್ ಹೇಳುತ್ತೆ ಗ್ರೇಟರ್ ಬೆಂಗಳೂರು ಲೋಕಸಭಾ ಇತಿಹಾಸ..?
ಏನ್ ಹೇಳುತ್ತೆ 28 ಕ್ಷೇತ್ರಗಳ 2014-19ರ ಲೋಕಸಭೆ ಲೆಕ್ಕಾಚಾರ..?
ಬೆಂಗಳೂರು ಗ್ರೇಟರ್ನಲ್ಲಿ ಈ ಬಾರಿಯೂ ಬಿಜೆಪಿ ಶಕ್ತಿ ಮೊಳಗುತ್ತಾ..?
ಲೋಕ ಸಮರಕ್ಕೆ ದಿನಗಳು ಹತ್ತಿರವಾಗುತ್ತಿವೆ. ಎಲ್ಲ ರಾಜಕೀಯ ಪಕ್ಷಗಳು ಈಗ ಎಲೆಕ್ಷನ್(Election) ಬ್ಯೂಸಿಯಲ್ಲಿವೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿ ಪ್ರಚಾರದ ಅಬ್ಬರ ಶುರುವಿಟ್ಟುಕೊಂಡಿವೆ. ಈ ಸಂದರ್ಭದಲ್ಲಿ ರಾಜ್ಯದ ಲೋಕಸಭಾ(Loksabha) ಕ್ಷೇತ್ರಗಳ ಇತಿಹಾಸವನ್ನು ತಿಳಿಯುವುದು ಬಹಳ ಮುಖ್ಯವಾಗಿದೆ. ಸತತ 3ನೇ ಬಾರಿ ಪ್ರಧಾನಿಯಾಗುವ ಜಿದ್ದಿನಲ್ಲಿ ನರೇಂದ್ರ ಮೋದಿ(Narendra Modi) ಇದ್ದಾರೆ. ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಪಿ(BJP) ಹಠ ತೊಟ್ಟಿದೆ. ಇನ್ನು, ಬಿಜೆಪಿ ಪಕ್ಷದ ಎನ್‌ಡಿಎ(NDA) ಕೂಟದ ಹೊರತಾಗಿ, ಕಾಂಗ್ರೆಸ್‌ನ I.N.D.I.A ಒಕ್ಕೂಟ, ಹೇಗಾದ್ರು ಮಾಡಿ ಮೋದಿಯನ್ನು ಸೋಲಿಸುವ ಪ್ರತಿಷ್ಠೆ ಮಾಡಿವೆ. ಹೀಗಾಗಿ 2024ರ ಲೋಕಸಭಾ ಚುಣಾವಣೆಯನ್ನು ಎಲ್ಲ ರಾಜಕೀಯ ಪಕ್ಷಗಳು ತುಂಬಾ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿವೆ.
ಇದನ್ನೂ ವೀಕ್ಷಿಸಿ: Loksabha Eection 2024: ದಾವಣಗೆರೆಗೆ ಯಡಿಯೂರಪ್ಪ ನೇತೃತ್ವದ ಟೀಂ: ರೆಬೆಲ್ಸ್ ಬಳಿಗೆ ತೆರಳುತ್ತಿರುವ ಯಡಿಯೂರಪ್ಪ ನಿಯೋಗ !