ಮುಂದುವರೆದ ಬೊಮ್ಮಾಯಿ ಕ್ಯಾಂಪೇನ್‌: ಬಿಜೆಪಿ ಭದ್ರಕೋಟೆ ಉಳಿಸುವುದೇ ಸಿಎಂಗೆ ಚಾಲೆಂಜ್‌ !

ಇಂದು ಸಿಎಂ 2ನೇ ದಿನದ ರೋಡ್‌ ಶೋ
ಹರಿಹರದಿಂದ ಸಿಎಂ ರೋಡ್ ಶೋ ಆರಂಭ
ಜಯ ವಾಹಿನಿ ಹೆಸರಲ್ಲಿ ಸಿಎಂ ರೋಡ್‌ ಶೋ

Share this Video
  • FB
  • Linkdin
  • Whatsapp

ದಾವಣಗೆರೆ: ಸಿಎಂ ಬಸವರಾಜ ಬೊಮ್ಮಾಯಿ ಇಂದು ದಾವಣಗೆರೆಯಲ್ಲಿ ಪ್ರಚಾರವನ್ನು ಆರಂಭಿಸಿದ್ದಾರೆ. ಹರಿಹರದ ಫಕೀರಯ್ಯ ಮಠದಿಂದ ಸಿಎಂ ರೋಡ್‌ ಆರಂಭವಾಗಿದೆ. ಹರಿಹರ ಪಟ್ಟಣದಲ್ಲಿ 16 ಕಿಲೋಮೀಟರ್‌ ಮೆಗಾ ರ್ಯಾಲಿ ನಡೆಯಲಿದೆ. ಜಯ ವಾಹಿನಿ ಎಂಬ ಹೆಸರಿನಲ್ಲಿ ರೋಡ್‌ ಶೋ ನಡೆಸುತ್ತಿದ್ದಾರೆ. ಸಿಎಂಗೆ ರಾಜ್ಯ ನಾಯಕರು ಸಾಥ್‌ ನೀಡಿದ್ದಾರೆ. ಇಂದು ಸಿಎಂ ಎರಡನೇ ದಿನದ ರೋಡ್‌ ಶೋ ನಡೆಸುತ್ತಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರದ ಕ್ಯಾಂಪೇನ್‌ ಮಾಡುತ್ತಿದ್ದಾರೆ. ಇಂದು ದಾವಣಗೆರೆ, ರಾಣೇಬೆನ್ನೂರು, ಹಾವೇರಿ, ಬಂಕಾಪೂರ, ಸವಣೂರು, ಕುಂದಗೋಳದಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ನಂತರ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. 

ಇದನ್ನೂ ವೀಕ್ಷಿಸಿ: ಮತ್ತೆ ಬಿಜೆಪಿಗೆ ಸಿಕ್ಕ ಲಿಂಗಾಯತ ಅಸ್ತ್ರ...ಚುನಾವಣೆ ಹೊಸ್ತಿಲಲ್ಲಿ ಎಡವಿದ ಟಗರು..?

Related Video