Jagadish Shettar: ಬೆಳಗಾವಿಯಲ್ಲಿ ಮೂಲ VS ವಲಸಿಗ ಸಮರ: ಕಾಂಗ್ರೆಸ್‌ಗೆ ಬಿಜೆಪಿ ನಾಯಕರಿಂದ ಕೌಂಟರ್ ಅಟ್ಯಾಕ್ !

ಜಗದೀಶ ಶೆಟ್ಟರ್ ಪರ ರಮೇಶ ಜಾರಕಿಹೊಳಿ ಸೈಲೆಂಟ್  ಗೇಮ್ ಪ್ಲ್ಯಾನ್
ಅತೃಪ್ತರನ್ನು ಸೆಳೆಯುವುದು,‌ ಬಿಜೆಪಿ ಗಟ್ಟಿಗೊಳಿಸಲು ರಮೇಶ ಓಡಾಟ
ತೀವ್ರ ಕುತೂಹಲ ಕೆರಳಿಸಿದ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆ

Share this Video
  • FB
  • Linkdin
  • Whatsapp

ಬೆಳಗಾವಿಯಲ್ಲಿ ಮೂಲ ಹಾಗೂ ವಲಸಿಗ ಸಮರ ಶುರುವಾಗಿದೆ. ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್(Jagadish Shettar) ವಿಳಾಸವನ್ನು ಲಕ್ಷ್ಮಿ ಹೆಬ್ಬಾಳ್ಕರ್‌(Lakshmi Hebbalkar) ಕೇಳಿದ್ದರು. ಇದೀಗ ಜಗದೀಶ್ ಶೆಟ್ಟರ್ ಬೆನ್ನಿಗೆ ನಿಂತಿರುವ ಬಾಲಚಂದ್ರ ಜಾರಕಿಹೊಳಿ(Balachandra Jarakiholi) ಕೌಂಟರ್ ನೀಡಿದ್ದಾರೆ. ಜಗದೀಶ್ ಶೆಟ್ಟರ್ ಗೆದ್ದು ಕೇಂದ್ರ ಸಚಿವರಾಗ್ತಾರೆ. ಎಲ್ಲರೂ ಅವರ ಮನೆ ಅಡ್ರೆಸ್ ಹುಡುಕಿಕೊಂಡು ಹೋಗಬೇಕಾಗುತ್ತದೆ. ಸುರೇಶ ಅಂಗಡಿ ಮನೆಯೇ ಜಗದೀಶ್ ಶೆಟ್ಟರ್ ಅವರ ಹಾಲಿ ವಿಳಾಸ. ಸುರೇಶ ಅಂಗಡಿ ಸಚಿವರಾಗಿದಕ್ಕೆ ರಾಜ್ಯಕ್ಕೆ ರೈಲ್ವೆ ಯೋಜನೆಗಳು ಸಾಕಷ್ಟು ಬಂದವು. ಎಂಪಿಯನ್ನು ವಿರೋಧ ಪಕ್ಷದಲ್ಲಿ ಕೂರಿಸಿ ಏನು ಮಾಡೋದು? ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಹೆಬ್ಬಾಳ್ಕರ್ ಮೂಲ ಕೆದಕಿದ ಬೆಳಗಾವಿ ಬಿಜೆಪಿ ಮುಖಂಡ ಧನಂಜಯ್‌ ಜಾಧವ್, ಅವರು ಖಾನಾಪುರ ಮೂಲದವರು. ಅದು ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಬೆಳಗಾವಿಯಲ್ಲಿ ರಾಜಕಾರಣ ಮಾಡ್ತಿರುವ ಹೆಬ್ಬಾಳ್ಕರ್ ಮೂಲ ಬೆಳಗಾವಿಯಲ್ಲ ಎಂದಿದ್ದಾರೆ.

ಇದನ್ನೂ ವೀಕ್ಷಿಸಿ: Siddaramaiah Campaign: ನಾನು ಇರಬೇಕಾ, ಬೇಡ್ವಾ ? ಇರಬೇಕು ಅಂದ್ರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ: ಸಿಎಂ ಸಿದ್ದರಾಮಯ್ಯ

Related Video