
'ಕೈ' ವಿರುದ್ಧ ಭಜರಂಗದಳ ಅಭಿಯಾನ: ನಾಳೆ ಸಂಜೆ ರಾಜ್ಯಾದ್ಯಂತ ಹನುಮಾನ್ ಚಾಲೀಸಾ ಪಠಣ
ಕೇಸರಿ ಪಡೆಗೆ ಅಸ್ತ್ರವಾಯ್ತು ಭಜರಂಗದಳ ಬ್ಯಾನ್ ಭರವಸೆ
ಕೊನೆ ಹಂತದಲ್ಲಿ ಬಿಜೆಪಿಗೆ ಮತ್ತೊಂದು ಹಿಂದುತ್ವದ ಅಸ್ತ್ರ
ಕಾಂಗ್ರೆಸ್‌ಗೆ ಟಕ್ಕರ್ ನೀಡಲು ಭಜರಂಗದಳ ಪ್ಲ್ಯಾನ್
ಮೈಸೂರು: ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ಬ್ಯಾನ್ ಮಾಡುವುದಾಗಿ ಹೇಳಿದ್ದು, ಇದು ಇದೀಗ ಕೇಸರಿ ಪಡೆಗೆ ಅಸ್ತ್ರವಾಗಿದೆ. ಅಲ್ಲದೇ ರಾಜ್ಯಾದ್ಯಂತ ಕಾಂಗ್ರೆಸ್ ವಿರುದ್ಧ ಭಜರಂಗದಳ ಅಭಿಯಾನ ಆರಂಭಿಸಿದ್ದು, ನಾಳೆ ಸಂಜೆ ಏಳು ಗಂಟೆಗೆ ರಾಜ್ಯಾದ್ಯಂತ ಸಾಮೂಹಿಕ ಹನುಮಾನ್ ಚಾಲೀಸಾ ಪಠಣಕ್ಕೆ ಕರೆ ಕೊಡಲಾಗಿದೆ. ಈ ಮೂಲಕ ಬಿಜೆಪಿಗೆ ಮತ್ತೊಂದು ಹಿಂದುತ್ವದ ಅಸ್ತ್ರ ಸಿಕ್ಕಂತಾಗಿದೆ. ಇನ್ನೂ ಈ ಬಗ್ಗೆ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್‌ಗೆ ವಿನಾಶ ಕಾಲೇ ವಿಪರೀತ ಬುದ್ಧಿ ಬಂದಿದೆ. ಅವರು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ಇದು ಅವರ ತಿರುಕನ ಕನಸು, ಬಂದ್ರೆ ತಾನೇ ಬ್ಯಾನ್ ಮಾಡೋದು ಎಂದು ಬಿಎಸ್‌ವೈ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ಭಜರಂಗದಳ ಬ್ಯಾನ್ ವಿಚಾರ: ಮಂಡ್ಯದ ಕೆರೆಗೋಡಿನಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ