Asianet Suvarna News Asianet Suvarna News

ಯಾರಾಗ್ತಾರೆ ಕಿಂಗ್ ಆಫ್ ಕೊರಟಗೆರೆ..ಸೋಲಿನ ಭಯದಲ್ಲಿದ್ದಾರಾ ಜಿ ಪರಮೇಶ್ವರ್..?

2023ರ ಕರ್ನಾಟಕ ಕುರುಕ್ಷೇತ್ರದ ಹೈವೋಲ್ಟೇಜ್‌  ಕಾರ್ಯಕ್ರಮ ಅತಿರಥರ ಅಖಾಡದಲ್ಲಿ ಕೊರಟಗೆರೆ ಕ್ಷೇತ್ರದ ಗ್ರೌಂಡ್ ರಿಪೋರ್ಟ್‌ ಮಾಡಲಾಗಿದೆ.

ಕಲ್ಪತರು ನಾಡು ತುಮಕೂರಿನ ಒಂದು ತಾಲೂಕು ಕೊರಟಗೆರೆ. ಒಂದು ಕಾಲದಲ್ಲಿ ಪಾಳೇಗಾರರಿಂದ ಆಳಲ್ಪಡುತ್ತಿದ್ದ ಊರು ಈಗ ರಾಜಕೀಯದಿಂದ ಭಾರಿ ಸದ್ದು ಮಾಡ್ತಾ ಇದೆ. ತ್ರಿಕೋನ ಸ್ಪರ್ಧೆಯ ನಿರೀಕ್ಷೆ ಇರೋದಕ್ಕೆ ಮೂರು ಪಕ್ಷಗಳ ಅಭ್ಯರ್ಥಿಗಳ ಮೇಲೆ ಕುತೂಹಲ ಹೆಚ್ಚಿದೆ. ಅದ್ರಲ್ಲೂ ಕಾಂಗ್ರೆಸ್ಸಿನ ಜಿ ಪರಮೇಶ್ವರ್ ಕ್ಷೇತ್ರವೆನ್ನೋ ಕಾರಣಕ್ಕೆ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಜಿ ಪರಮೇಶ್ವರ್. ರಾಜ್ಯ ರಾಜಕಾರಣದಲ್ಲಿ ತುಂಬಾ ಖ್ಯಾತ ನಾಮ. ಕಾಂಗ್ರೆಸ್ ಕಟ್ಟಾಳು. ದಲಿತ ಸಿಎಂ ಕೂಗು ಬಂದಾಗಲೆಲ್ಲಾ ಮೊದಲು ಕೇಳಿ ಬರುವ ಹೆಸರು  ಜಿ ಪರಮೇಶ್ವರ್ ಅವರದ್ದು. ಆದರೆ  ಸ್ವಪಕ್ಷೀಯರಿಂದ ಪರಮೇಶ್ವರ್ ಸೋತರು, ಒಳ ಏಟಿಗೆ ಸೋಲು ಕಂಡರು ಅನ್ನೋದು ರಾಜ್ಯ ರಾಜಕೀಯದ ಫೇಮಸ್ ಟಾಕ್. ಇದೊಂದು ವಿಚಾರ ಬಂದಾಗಲೆಲ್ಲಾ ಕೇಳಿ ಬರೋ ಹೆಸರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಈ ಬಾರಿ ಕೊರಟಗೆರೆಯಲ್ಲಿ ಪರಮೇಶ್ವರ್  ಗೆಲ್ಲುತ್ತಾರೆ ಅನ್ನೋದೇ ಅಲ್ಲಿಯ ಕದನ ಕುತೂಹಲ.

Video Top Stories