ಜಮ್ಮು-ಕಾಶ್ಮೀರದಲ್ಲಿ ಪ್ರಪಾತಕ್ಕೆ ಬಿದ್ದ ಕಾರು.. ಬೆಂಗಳೂರಿನ ಮೂವರ ದುರ್ಮರಣ

ಜಮ್ಮು ಕಾಶ್ಮೀರದ ಅಮರನಾಥ ಯಾತ್ರೆ ಸಮೀಪದ ಝೋಜಿಲಾ ಪಾಸ್ ಬಳಿ ಬೆಂಗಳೂರು ಮೂಲದ ಮೂವರು ಸಾವಿಗೀಡಾಗಿದ್ದು, ಕಾರು ಪ್ರಪಾತಕ್ಕೆ ಬಿದ್ದಿದೆ.

First Published Jul 17, 2024, 11:59 AM IST | Last Updated Jul 17, 2024, 11:59 AM IST

ಜಮ್ಮು ಕಾಶ್ಮೀರದಲ್ಲಿ(Jammu and Kashmir) ಬೆಂಗಳೂರು(Bengaluru) ಮೂಲದ ಮೂವರ ಸಾವಿಗೀಡಾಗಿದ್ದಾರೆ. ಪ್ರವಾಸಕ್ಕೆ ತೆರಳಿದ್ದ ಒಂದೇ ಕುಟುಂಬದ ಮೂವರು ದುರ್ಮರಣಕ್ಕೀಡಾಗಿದ್ದಾರೆ. ತಂದ್ರದಾಸ್(67), ಮೊನಾಲಿಸಾ ದಾಸ್(41), ಮತ್ತೊಬ್ಬ ಪುರುಷ ಸಾವಿಗೀಡಾಗಿದ್ದಾರೆ. ಬಾಲಕಿ ಅದ್ರಿತಾ ಖಾನ್(9)ಗೆ ಗಾಯವಾಗಿದೆ. ಅಮರನಾಥ ಯಾತ್ರೆ (Amarnath yatra ) ಸಮೀಪದ ಝೋಜಿಲಾ ಪಾಸ್ ಬಳಿ ಈ ಘಟನೆ ನಡೆದಿದೆ. ಬೆಳ್ಳಂದೂರಿನ ಗ್ರೀನ್ ಗ್ಲೆನ್ ಲೇಔಟ್ ನಿವಾಸಿಗಳು ಇವರಾಗಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಬಾಡಿಗೆ ಕಾರಿನಲ್ಲಿ ಕುಟುಂಬ ಪ್ರಯಾಣ ಮಾಡ್ತಿತ್ತು. ಎದುರಿದ್ದ ಕಾರೊಂದು ಕೆಟ್ಟು ನಿಂತಿತ್ತು. ಈ ವೇಳೆ ಅದನ್ನು ನೋಡಲು ಚಾಲಕ ಕಾರಿನಿಂದ ಇಳಿದಿದ್ದಾನೆ. ಈ ವೇಳೆ ಹ್ಯಾಂಡ್ ಬ್ರೇಕ್ ಹಾಕಿರಲಿಲ್ಲ, ಹೀಗಾಗಿ ಪ್ರಪಾತಕ್ಕೆ ಕಾರು ಬಿದ್ದಿದೆ. ಘಟನೆಯಲ್ಲಿ ಮೂವರು ಸಾವಿಗೀಡಾಗಿದ್ದು, ಮೃತದೇಹವನ್ನು ಸಿಆರ್‌ಪಿಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಹೊರತೆಗೆದಿದ್ದಾರೆ.

ಇದನ್ನೂ ವೀಕ್ಷಿಸಿ:  ಜಮ್ಮು-ಕಾಶ್ಮೀರದ ದೋಡಾದಲ್ಲಿ ಉಗ್ರರ ಅಟ್ಟಹಾಸ! ಹುತಾತ್ಮ ಯೋಧರಿಗೆ ರಾಜನಾಥ್ ಸಿಂಗ್ ಶ್ರದ್ದಾಂಜಲಿ..!