Asianet Suvarna News Asianet Suvarna News

ವಿಧಾನಸಭಾ ಕ್ಷೇತ್ರ ಆಯ್ಕೆ: ಸಿದ್ದರಾಮಯ್ಯ ಬೆನ್ನಿಗೆ ನಿಂತ ಡಿಕೆಶಿ!

ಸಿದ್ದರಾಮಯ್ಯ ಅವರಿಗೆ ಸ್ಪರ್ಧಿಸಲು ನೂರು ಕ್ಷೇತ್ರಗಳಿವೆ. ನೀವು ಎಲ್ಲಾದರೂ ನಿಲ್ಲಬಹುದು, ನಿಮ್ಮ ತೀರ್ಮಾನ ನಿಮಗೆ ಬಿಟ್ಟಿದ್ದು ಎಂದು ಹೈಕಮಾಂಡ್‌ ತಿಳಿಸಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾಹಿತಿ ನೀಡಿದರು. 

ಬೆಂಗಳೂರು (ಮಾ.21): ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಸಿಗುತ್ತಿಲ್ಲ ಅಂತೇನಿಲ್ಲ. ಅವರಿಗೆ ನೂರು ಕ್ಷೇತ್ರವಿದೆ. ನೀವು ಎಲ್ಲಾದರೂ ನಿಲ್ಲಬಹುದು, ನಿಮ್ಮ ತೀರ್ಮಾನ ನಿಮಗೆ ಬಿಟ್ಟಿದ್ದು ಎಂದು ಹೈಕಮಾಂಡ್‌ ತಿಳಿಸಿದೆ ಎಂಬುದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. 

ರಾಜ್ಯದಲ್ಲಿ ಕೆಲವರಿಗೆ ಒಂದೆರಡು ಕ್ಷೇತ್ರಗಳು ಮಾತ್ರ ಸೀಮಿತವಾಗಿರುತ್ತವೆ. ಆದರೆ, ಸಿದ್ದರಾಮಯ್ಯ ಅವರಿಗೆ ನೂರು ಕ್ಷೇತ್ರಗಳಿವೆ. ಅವರು ಎಲ್ಲಾದರೂ ನಿಲ್ಲಬಹುದು ಎಂದು ಹೈಕಮಾಮಡ್‌ ಹೇಳಿದೆ. ಬಾದಾಮಿಯಲ್ಲಿಯೂ ಕೂಡ ಶೇ.100 ಗೆಲ್ಲುವ ರಿಪೋರ್ಟ್ ಬಂದಿದೆ. ಬಾದಾಮಿ ಜನರು ಬಹಳಷ್ಟು ಒತ್ತಾಯ ಮಾಡುತ್ತಿರುವುದರಿಂದ ಯೋಚನೆ ಮಾಡಿ ಎಂದಿದೆ. ಮೈಸೂರು-ಚಾಮರಾಜನಗರ ಜನ ವರುಣಾಕ್ಕೆ ಬನ್ನಿ ಅಂತಿದ್ದಾರೆ. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಜನ ಕೋಲಾರಕ್ಕೆ ಬನ್ನಿ ಅಂತಿದ್ದಾರೆ. ಹಾಗಾಗಿ ನಮ್ಮ ಹೈಕಮಾಂಡ್ ನೀವೆ ಸೂಕ್ತ ನಿರ್ಧಾರ ತೆಗೆದುಕೊಳ್ಳಿ ಎಂದು ತಿಳಿಸಿರುವುದಾಗಿ ಮಾಹಿತಿ ನೀಡಿದರು.

ಬಿಜೆಪಿಗೆ ಬಿಸಿತುಪ್ಪ ಆಗು​ವ​ರೇ ಆಯನೂರು ಮಂಜುನಾಥ್‌? : ಪಕ್ಷೇತರವಾಗಿ ಸ್ಪರ್ಧೆ ಖಚಿತ

ಇನ್ನು ಅಪೇಕ್ಷೆ ಪಡುವ ಜನರ ಬೇಸರ ಪಡಿಸ್ಬೇಡಿ ಎನ್ನುವ ಸಲಹೆ ಕೊಟ್ಟಿದೆ. ಅವರಿಗೆ ಕ್ಷೇತ್ರ ಇಲ್ಲ ಅಂತಲ್ಲ. ಅವರ ಬಗ್ಗೆ ಯಾರು ಮಾತನಾಡಬಾರದು. ಅವರ ವ್ಯಕ್ತಿತ್ವದ ಬಗ್ಗೆ ಮಾತಾನಾಡಿದವರಿಗೆಲ್ಲ ಉತ್ತರ ಕೊಡಲು ಆಗಲ್ಲ. ವರ್ತೂರು ಪ್ರಕಾಶ್- ಸಿದ್ದರಾಮಯ್ಯ ಹೋಲಿಕೆ ಮಾಡೋದು ಸರಿಯಲ್ಲ. ಪ್ರಚಾರಕ್ಕಾಗಿ ವರ್ತೂರು, ಸಿ.ಟಿ.ರವಿ, ಅಶ್ವಥ್ ನಾರಾಯಣ್ ರಂತವರಿಂದ ಕ್ಷುಲ್ಲಕ ಹೇಳಿಕೆ‌ ನೀಡುತ್ತಿದ್ದಾರೆ. ಇವರೆಲ್ಲರು ಪ್ರಜಾಪ್ರಭುತ್ವದಲ್ಲಿ ತಲೆತಗ್ಗಿಸುವ ರೀತಿ ಇದ್ದಾರೆ. ಇಂತಹವರ ಬಗ್ಗೆ ಮಾತನಾಡಲು ನನಗೆ ಅಸಹ್ಯ ಆಗುತ್ತದೆ. ಖರ್ಗೆ, ಸಿದ್ದು, ಡಿಕೆಶಿ ಓಟ ತಡೆಯಲು ಆಗ್ತಿಲ್ಲ. ಅದಕ್ಕೆ ಅವರಿವರ ಕೈಯಲ್ಲಿ ಇಲ್ಲಸಲ್ಲದ ಹೇಳಿಕೆ ಕೊಡಿಸುತ್ತಿದ್ದಾರೆ ಎಂದರು.