Asianet Suvarna News Asianet Suvarna News

ಗೃಹಲಕ್ಷ್ಮೀ, ಗೃಹಜ್ಯೋತಿ ಗ್ಯಾರಂಟಿಗಳಿಗೆ ಮುಹೂರ್ತ್ ಫಿಕ್ಸ್ !: ಸೋಮವಾರದಿಂದ 'ಶಕ್ತಿ'ಸ್ಮಾರ್ಟ್‌ ಕಾರ್ಡ್‌ಗೆ ಅರ್ಜಿ ಸ್ವೀಕಾರ

ಸೋಮವಾರದಿಂದ ಮಹಿಳೆಯರು ಶಕ್ತಿ ಸ್ಮಾರ್ಟ್‌ ಕಾರ್ಡ್‌ನನ್ನು ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
 

First Published Jun 17, 2023, 12:12 PM IST | Last Updated Jun 17, 2023, 1:01 PM IST

ಬೆಂಗಳೂರು: ಶಕ್ತಿ ಯೋಜನೆಯನ್ನು ಈಗಾಗಲೇ ಸರ್ಕಾರ ಅನುಷ್ಠಾನಕ್ಕೆ ತಂದಿದ್ದು, ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ.ಇದೀಗ ಇದಕ್ಕೆ ಶಕ್ತಿ ಸ್ಮಾರ್ಟ್‌ ಕಾರ್ಡ್‌ ಪಡೆಯಲು ಸೋಮವಾರದಿಂದ ಅರ್ಜಿ ಸಲ್ಲಿಸಬಹುದಾಗಿದೆ. ಈ ಯೋಜನೆಯ ಫಲಾನುಭವಿಗಳು ರಾಜ್ಯದೊಳಗೆ ಮಾತ್ರ ಪ್ರಯಾಣಿಸಬಹುದು ಮತ್ತು ಯಾವುದೇ ಅಂತರ್‌ ರಾಜ್ಯ ಬಸ್‌ಗಳಲ್ಲಿ ಸಂಚರಿಸುವಂತಿಲ್ಲ. ಇನ್ನೂ ಸ್ಮಾರ್ಟ್‌ನನ್ನು ವಿಳಾಸದ ದಾಖಲೆ ನೀಡಿ ಪಡೆಯಬಹುದಾಗಿದೆ. ಬೆಂಗಳೂರು ಕೇಂದ್ರದಲ್ಲಿ ಸರ್ಕಾರ ಪ್ರತ್ಯೇಕ ಕೇಂದ್ರವನ್ನು ಮಾಡಿದೆ. ಅಲ್ಲದೇ ಸೇವಾ ಸಿಂಧು ಪೋರ್ಟಲ್‌ ಮೂಲಕವು ಪಡೆಯಬಹುದಾಗಿದೆ. ಖಾಸಗಿ ಕಂಪನಿಗಳಿಗೆ ಟೆಂಡರ್‌ ಕರೆಯುವ ಸಾಧ್ಯತೆ ಸಹ ಇದೆ. 

ಇದನ್ನೂ ವೀಕ್ಷಿಸಿ: ಸೌಜನ್ಯಾ ಆತ್ಯಾಚಾರ, ಕೊಲೆ ಪ್ರಕರಣಕ್ಕೆ ಸಾಕ್ಷಿಗಳೇ ಇಲ್ಲವಂತೆ:ಕಾಲೇಜಿಗೆ ಹೋದವಳು ವಾಪಸ್ ಬರಲೇ ಇಲ್ಲ!

Video Top Stories