Asianet Suvarna News Asianet Suvarna News

ಸೌಜನ್ಯಾ ಆತ್ಯಾಚಾರ, ಕೊಲೆ ಪ್ರಕರಣಕ್ಕೆ ಸಾಕ್ಷಿಗಳೇ ಇಲ್ಲವಂತೆ:ಕಾಲೇಜಿಗೆ ಹೋದವಳು ವಾಪಸ್ ಬರಲೇ ಇಲ್ಲ!

ಸೆನ್ಸೇಷನ್ ಹುಟ್ಟಿಸಿದ್ದ ಕೇಸ್‌ನಲ್ಲಿ ಖುಲಾಸೆ ಸಿಕ್ಕಿದ್ದೇಗೆ..?
11 ವರ್ಷದ ಹಿಂದೆ ಬಾಲಕಿಯನ್ನು ಉರಿದು ಮುಕ್ಕಿದ್ಯಾರು ?
ಕೇಸ್ನ ತೀರ್ಪಿನ ಬಗ್ಗೆ ಸೌಜನ್ಯ ತಾಯಿ ಏನ್ ಹೇಳ್ತಾರೆ..?

First Published Jun 17, 2023, 11:12 AM IST | Last Updated Jun 17, 2023, 11:12 AM IST

ಬರೊಬ್ಬರಿ 11 ವರ್ಷದ ಹಿಂದೆ ಕಾಲೇಜಿಗೆ ಹೋಗಿದ್ದ 17 ವರ್ಷದ ಯುವತಿ ನಾಪತ್ತೆಯಾಗಿದ್ಲು. ಮಾರನೇ ದಿನ ಆಕೆ ಹೆಣವಾಗಿ ಸಿಕ್ಕಿದ್ಲು. ಆಕೆಯನ್ನ ಯಾರೋ ಅತ್ಯಾಚಾರ ಮಾಡಿ ಕೊಲೆ ಮಾಡಿಬಿಟ್ಟಿದ್ರು. ಇದೆಲ್ಲಾ ನಡೆದಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದ ಕೂಗಳತೆ ದೂರದಲ್ಲಿ.ನಾವು ಮಾತನ್ನಾಡ್ತಿರೋದು ಸೌಜನ್ಯ ರೇಪ್ ಆ್ಯಂಡ್ ಮರ್ಡರ್ ಕೇಸ್ ಬಗ್ಗೆ. ಇಡೀ ದೇಶದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಕೇಸ್‌ನ ತೀರ್ಪು ಇವತ್ತು ಪ್ರಕಟವಾಗಿದೆ. ದೇವರಂತೆ ಪೂಜಿಸುತ್ತಿದ್ದ ವೀರೇಂದ್ರ ಹೆಗಡೆಯ ವಿರುದ್ಧವೇ ಸೌಜನ್ಯ ಹೆತ್ತವರು ಆರೋಪಿಸಿಬಿಟ್ಟಿದ್ರು. ಇದಕ್ಕೆ ಕಾರಣ ಅವರ ಮಗಳ ಕೊಲೆ ಕೇಸ್‌ನಲ್ಲಿ ಹೆಗಡೆಯವರ ಮನೆಯ ಮಗನ ಹೆಸರು ಕೇಳಿ ಬಂದಿದ್ದು. ಹಾಗಾದ್ರೆ 11 ವರ್ಷದ ಹಿಂದಿನ ಸೌಜನ್ಯ ಕೇಸ್‌ನಲ್ಲಿ ಕೋರ್ಟ್ ಏನ್ ತೀರ್ಪು ಕೊಟ್ಟಿತ್ತು..? ಈ ಕೇಸ್ನ ತನಿಖೆ ಹೇಗೆ ನಡೆದಿತ್ತು..? ಇಡೀ ದೇಶದ ನಿದ್ದೆಗೆಡಸಿದ್ದ ಸೌಜನ್ಯ ಕೇಸ್ನ ಕಂಪ್ಲೀಟ್ ಡಿಟೇಲ್ಸ್  ಇಲ್ಲಿದೆ.

ಇದನ್ನೂ ವೀಕ್ಷಿಸಿ: ಫ್ರೀ ಕೊಟ್ಟು ಆರ್ಥಿಕ ಒತ್ತಡಕ್ಕೆ ಬಿತ್ತಾ ಆ ರಾಜ್ಯ?: ಕರ್ನಾಟಕದಲ್ಲಿ ಹೇಗಿದೆ ಗೊತ್ತಾ ಪರಿಸ್ಥಿತಿ..?

Video Top Stories