ರಾಮದಾಸ್‌ ಅಪ್ಪಿ ಬೆನ್ನು ತಟ್ಟಿದ ಅಮಿತ್‌ ಶಾ !

ಏರ್‌ಪೋರ್ಟ್‌ನಲ್ಲಿ ಶಾಗೆ ಭರ್ಜರಿ ಸ್ವಾಗತ
ರಾಮದಾಸ್‌ಗೆ ಅಮಿತ್‌ ಶಾ ಆತ್ಮೀಯ ಅಪ್ಪುಗೆ
ಶಾ ಅಪ್ಪುಗೆಯಿಂದ ರಾಮದಾಸ್‌ ಫುಲ್‌ ಖುಷ್‌

Share this Video
  • FB
  • Linkdin
  • Whatsapp

ಮೈಸೂರು: ಚುನಾವಣಾ ಚಾಣಕ್ಯ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದು, ಅವರನ್ನು ದೇವಾಲಯದ ಬಳಿ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಬಳಿಕ ಶಾ ದೇವಿ ದರ್ಶನ ಪಡೆದರು. ಸಂಸದ ಪ್ರತಾಪ್‌ ಸಿಂಹ ಅಮಿತ್‌ ಶಾ ಜೊತೆಗಿದ್ದರು. ಮಹಾಮಂಗಳಾರತಿ ಬಳಿಕ ಶಾ ದೇವಿಗೆ ಪಾರ್ಥನೆ ಸಲ್ಲಿಸಿದರು. ಇನ್ನೂ ಅಮಿತ್‌ ಶಾ ಸ್ವಾಗತಿಸಲು ಶಾಸಕ ರಾಮದಾಸ್ ಏರ್‌ಪೋರ್ಟ್‌ಗೆ ತೆರಳಿದ್ದರು. ಈ ವೇಳೆ ಅಮಿತ್‌ ಶಾ ಅವರು ರಾಮದಾಸ್‌ಗೆ ಆತ್ಮೀಯ ಅಪ್ಪುಗೆ ನೀಡಿದ್ದಾರೆ. ಈ ಹಿಂದೆ ಪ್ರಧಾನಿ ಮೈಸೂರಿಗೆ ಭೇಟಿ ನೀಡಿದ್ದಾಗ, ಕೆ.ಆರ್‌. ಕ್ಷೇತ್ರದ ಶಾಸಕ ಎಸ್‌.ಎ. ರಾಮದಾಸ್‌ಗೆ ಗುದ್ದು ನೀಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: 'ಜಯ ವಾಹಿನಿ ರೋಡ್‌ ಶೋ'ಗೆ ಜನರ ಅಭೂತಪೂರ್ವ ಬೆಂಬಲ ಸಿಕ್ಕಿದೆ: ಸಿಎಂ

Related Video