ಸರ್ಕಾರ ಮಾಡುವಷ್ಟು ನಂಬರ್‌ ಕಾಂಗ್ರೆಸ್‌ಗೆ ಬರೋದೇ ಇಲ್ಲ: ಅಮಿತ್‌ ಶಾ ಲೇವಡಿ

ತೇರದಾಳದಲ್ಲಿ ಅಮಿತ್‌ ಶಾ ಪ್ರಚಾರ
ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ
ಬಿಜೆಪಿ ನಾಯಕರೇ ಮುಂದಿನ ಸಿಎಂ
 

Share this Video
  • FB
  • Linkdin
  • Whatsapp

ಬಾಗಲಕೋಟೆ: ಮುಖ್ಯಮಂತ್ರಿ ಹುದ್ದೆಗಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪೈಪೋಟಿ ನಡೆಸುತ್ತಿದ್ದಾರೆ. ಇದಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಲೇವಡಿ ಮಾಡಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ನೀವು ಯಾಕೆ ಕಿತ್ತಾಟ ಮಾಡುತ್ತೀರಿ. ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಿಲ್ಲ. ಈ ಬಾರಿ ಬಿಜೆಪಿಯೇ ಸರ್ಕಾರ ರಚನೆ ಮಾಡಲಿದೆ. ನಿಮಗೆ ಸರ್ಕಾರ ರಚಿಸುವಷ್ಟು ನಂಬರ್‌ ಬರುವುದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್‌ ವಿರುದ್ಧ ಅಮಿತ್‌ ಶಾ ಕಾಂಗ್ರೆಸ್‌ಗೆ ವ್ಯಂಗ್ಯ ವಾಡಿದ್ದಾರೆ. ಇದೇ ವೇಳೆ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ ಎಂದು ಸಚಿವ ಮುರಗೇಶ ನಿರಾಣಿ, ಗೋವಿಂದ ಕಾರಜೋಳ, ಜಗದೀಶ ಗುಡಗುಂಟಿ, ಸಿದ್ದು ಸವದಿ ಅವರನ್ನು ವೇದಿಕೆ ಮುಂಭಾಗದಲ್ಲಿ ಕರೆದು ಅಮಿತ್ ಶಾ ಮತದಾರರಲ್ಲಿ ಮನವಿ ಮಾಡಿಕೊಂಡರು. 

ಇದನ್ನೂ ವೀಕ್ಷಿಸಿ: Karnataka Election: ಬಿಜೆಪಿಯ ತ್ರಿಮೂರ್ತಿಗಳಿಂದ ಬದಲಾಗುತ್ತಾ ಮತ ಲೆಕ್ಕ ?

Related Video