Asianet Suvarna News Asianet Suvarna News

ನಾಳೆಯಿಂದ ರಾಜ್ಯದಲ್ಲಿ ಅಮಿತ್ ಶಾ ಕಾರ್ಯಕ್ರಮ, ಕಾಂಗ್ರೆಸ್ ಸಿಡಿಮಿಡಿ!

ಹಳೇ ಮೈಸೂರು ತಲುಪಿದ ಕಾಂಗ್ರೆಸ್ ಜಂಟಿ ಬಸ್ ಯಾತ್ರೆ, ನಿರಾಣಿ ವಿರುದ್ಧ ಗುರಾಣಿ ಹಿಡಿದ ಗುತ್ತೇದಾರ್, ರೆಬೆಲ್ ಆಗಿದ್ದ ಯತ್ನಾಲ್ ಇದೀಗ ಸೈಲೆಂಟ್, ಹುಬ್ಬಳ್ಳಿ, ಧಾರವಾಡ ಸೇರಿ ಎಲ್ಲೆಲ್ಲಿ ಅಮಿತ್ ಶಾ ಕಾರ್ಯಕ್ರಮ? ಸೇರಿದಂತೆ ಇಂದಿನ ಇಡೀ ದಿನದ ಸುದ್ದಿ ಹೈಲೆಟ್ಸ್ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಗೆ ಅಖಾಡ ರೆಡಿಯಾಗಿದೆ. ಅಧಿಕಾರ ಹಿಡಿಯಲು ಮೂರು ಪಕ್ಷಗಳು ಬಿರುಸಿನ ಕಾರ್ಯಕ್ರಮ ಹಮ್ಮಿಕೊಂಡಿದೆ. ಇತ್ತ ಬಿಜೆಪಿಗೆ ಉತ್ಸಾಹ ಮತ್ತೆ ಇಮ್ಮಡಿಯಾಗಿದೆ. ಜನವರಿ 27ರಿಂದ ರಾಜ್ಯದಲ್ಲಿ ಅಮಿತ್ ಶಾ ಪ್ರವಾಸ ಆರಂಭಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಸೇರಿದಂತೆ ಘಟಾನುಘಟಿ ನಾಯಕರು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಇದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯರನ್ನು ಸಿಡಿಮಿಡಿಗೊಳಿಸಿದೆ. ಅಮಿತ್ ಶಾ ಜೈಲಿಗೆ ಹೋದವರು, ಅವರಿಂದ ಏನು ಮತ ಕೇಳ್ತಾರಾ? ಎಂದು ಸಿದ್ದು ಪ್ರಶ್ನಿಸಿದ್ದಾರೆ. ಇದಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ.  ಧಾರವಾಡ, ಹುಬ್ಬಳ್ಳಿ, ಕಿತ್ತೂರು, ಬೆಳಗಾವಿಗಳಲ್ಲಿ ಅಮಿತ್ ಶಾ ಸರಣಿ ಸಭೆ ನಡೆಸಲಿದ್ದಾರೆ. ಕುಂದಗೋಳದಲ್ಲಿ 1.5 ಕಿಲೋಮೀಟರ್ ರೋಡ್ ಶೋ ಕೂಡ ನಡೆಸುತ್ತಿದ್ದಾರೆ. ಅಮಿತ್ ಶಾ ಕಾರ್ಯಕ್ರಮಗಳ ಸಂಪೂರ್ಣ ವಿವರ ಇಲ್ಲಿವೆ.

Video Top Stories