Asianet Suvarna News Asianet Suvarna News

ಏನಿದು ಸಿಎಂ ಸಂಘರ್ಷದ ಹೊತ್ತಲ್ಲಿ ಸಿದ್ದು ಪಗಡೆಯಾಟ ? ಹುಬ್ಬಳ್ಳಿ ಅಖಾಡದಲ್ಲಿ ಹಳೇ ಪೈಲ್ವಾನನ ಹೊಸ ಆಟ..!

ಹಳೇ ಚದುರಂಗದಲ್ಲಿ ಹೊಸ ದಾಳ ಉರುಳಿಸ್ತಾರಾ 'ಚತುರ'ರಾಮಯ್ಯ..?
2005ರಲ್ಲಿ ಗಂಡು ಮೆಟ್ಟಿದ ನೆಲದಿಂದಲೇ ಮೊಳಗಿತ್ತು ಸಿದ್ದು ರಣಘೋಷ..!
ಮತ್ತೊಂದು ಶಕ್ತಿ ಪ್ರದರ್ಶನಕ್ಕೆ ಹುಬ್ಬಳ್ಳಿಯನ್ನೇ ಆಯ್ಕೆ ಮಾಡಿಕೊಂಡ ಸಿಎಂ..!
 

First Published Jul 7, 2024, 1:06 PM IST | Last Updated Jul 7, 2024, 1:07 PM IST

ಒಂದು ಸಿದ್ದರಾಮೋತ್ಸವ (Siddaramaotsava) ಸಿದ್ದರಾಮಯ್ಯನವರನ್ನು 2ನೇ ಬಾರಿ ಮುಖ್ಯಮಂತ್ರಿ ಪಟ್ಟಕ್ಕೇರಿಸಿತು. ಅದೇ ಸಿದ್ದರಾಮೋತ್ಸವ ಸಿದ್ದು ವೈರಿಗಳ ಸದ್ದನ್ನೇ ಅಡಗಿಸಿಬಿಡ್ತು. ಸಿದ್ದರಾಮಯ್ಯನವರ(Siddaramaiah) ಪಟ್ಟದ ಮೇಲೆ ಹತ್ತಾರು ಕಣ್ಣು. ಮುಖ್ಯಮಂತ್ರಿ ಪಟ್ಟವನ್ನ(CM Post) ಡಿಕೆ ಶಿವಕುಮಾರ್(DK Shivakumar) ಅವ್ರಿಗೆ ಬಿಟ್ಟುಕೊಂಡುವಂತೆ ಸ್ವಾಮೀಜಿಗಳ ಪಟ್ಟು. ಡಿಕೆಶಿ ಆಪ್ತ ಶಾಸಕರಿಂದಲೂ ಸಿಎಂ ಪಟ್ಟಕ್ಕಾಗಿ ಬೇಡಿಕೆ. ಪರಿಣಾಮ, ಕಾಂಗ್ರೆಸ್‌ನಲ್ಲಿ ಖಾಲಿಯಿಲ್ಲದ ಸಿಎಂ ಕುರ್ಚಿಗಾಗಿ ಮಹಾ ಸಂಘರ್ಷ. ಹಾಗಾದ್ರೆ ಹೈಕಮಾಂಡ್ ಹೇಳಿದ್ರೆ ಸಿದ್ದರಾಮಯ್ಯನವರು ಸಿಎಂ ಕುರ್ಚಿಯನ್ನು ಬಿಟ್ಟು ಕೊಡ್ತಾರಾ..? ಗೊತ್ತಿಲ್ಲ.. ಆದ್ರೆ ಸಿದ್ದರಾಮಯ್ಯ ಅಷ್ಟು ಸುಲಭವಾಗಿ ಪಟ್ಟ ಬಿಟ್ಟು ಕೊಡೋ ಪೈಲ್ವಾನ್ ಅಂತೂ ಅಲ್ಲವೇ ಅಲ್ಲ. ರಾಜಕೀಯದಲ್ಲಿ ಯಾವಾಗ ಯಾವ ಪಟ್ಟುಗಳನ್ನು ಹಾಕ್ಬೇಕು, ಯಾವ ಪಟ್ಟು ಹಾಕಿದ್ರೆ, ಎದುರಾಳಿಯನ್ನು ಮಟ್ಟ ಹಾಕ್ಬಹ್ದು ಅನ್ನೋದನ್ನು ಅರೆದು ಕುಡಿದಿರೋ ಹಳೇ ಪೈಲ್ವಾನ್ ಸಿದ್ದರಾಮಯ್ಯ. ಅಷ್ಟಿಲ್ದೇ ಹೋಗಿದ್ರೆ, ಜೆಡಿಎಸ್‌ನಿಂದ ಬಂದು, ಕಾಂಗ್ರಸ್‌ನ (Congress)ಘಟಾನುಘಟಿಗಳನ್ನೇ ಮೀರಿಸಿ, ಎರಡು ಬಾರಿ ಮುಖ್ಯಮಂತ್ರಿಯಾಗೋದಕ್ಕೆ ಸಾಧ್ಯವಾಗ್ತಿಲ್ಲ. ಸಿಎಂ ಕುರ್ಚಿ ಮೇಲೆ ಡಿಸಿಎಂ ಡಿಕೆ ಶಿವಕುಮಾರ್ ಕಣ್ಣಿಟ್ಟಿದ್ದಾರೆ. ಡಿಕೆಶಿ ಪರ ಒಕ್ಕಲಿಗ ಸ್ವಾಮೀಜಿಗಳು ವಕಾಲತ್ತು ವಹಿಸುತ್ತಿದ್ದಾರೆ. ಇದ್ರ ಮಧ್ಯೆ ಅಧಿಕಾರ ಹಂಚಿಕೆಯ ಸೂತ್ರವೂ ಸದ್ದು ಮಾಡ್ತಾ ಇದೆ. ಎರಡೂವರೆ ವರ್ಷಗಳ ನಂತ್ರ ಅಧಿಕಾರ ಬಿಟ್ಟುಕೊಡಬೇಕಾದ ಪರಿಸ್ಥಿತಿ ಎದುರಾಗಲಿದೆ ಅನ್ನೋ ಮಾತುಗಳೂ ಕೇಳಿ ಬರ್ತಾ ಇವೆ.

ಇದನ್ನೂ ವೀಕ್ಷಿಸಿ:  'ಫಾರೆಸ್ಟ್'ನಲ್ಲಿ ಓಡೋ ಓಡೋ‌‌ ಅಂತಾ ಓಡಿದ ಚಿಕ್ಕಣ್ಣ, ರಂಗಾಯಣ ರಘು..!