ಸುಧಾಕರ್‌ ಪರ ನಟ-ನಟಿಯರ ಪ್ರಚಾರ: ನಟಿ ಹರ್ಷಿಕಾ ಪೂಣಚ್ಚ, ದಿವ್ಯ ಉರುಡುಗರಿಂದ ಮತಬೇಟೆ

ಚಿಕ್ಕಬಳ್ಳಾಪುರದಲ್ಲಿ ಡಾ.ಕೆ. ಸುಧಾಕರ್‌ ಪರ ನಟಿ ಹರ್ಷಿಕಾ ಪೂಣಚ್ಚ, ಬಿಗ್‌ಬಾಸ್‌ನ ದಿವ್ಯಾ ಉರುಡುಗ, ನಟ ಭುವನ್‌ ಪೊನ್ನಣ್ಣ ಪ್ರಚಾರ ಮಾಡಿದರು.

Share this Video
  • FB
  • Linkdin
  • Whatsapp

ಚಿಕ್ಕಬಳ್ಳಾಪುರ: ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್‌ ಪರ ನಟ- ನಟಿಯರು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ, ಬಿಗ್‌ಬಾಸ್‌ನ ದಿವ್ಯಾ ಉರುಡುಗ, ನಟ ಭುವನ್‌ ಪೊನ್ನಣ್ಣ ಕ್ಯಾಂಪೇನ್‌ ನಡೆಸಿದರು. ಪೆರೆಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಟಿಯರು ಮತಶಿಕಾರಿ ಮಾಡಿದರು. ನಟ ಭುವನ್‌ ಪೊನ್ನಣ್ಣ ಜಿಲ್ಲೆಯ ಮಂಚೇನಹಳ್ಳಿಯಲ್ಲಿ ಪ್ರಚಾರ ನಡೆಸಿದರು. ಮನೆ ಮನೆಗೆ ತೆರಳಿ ಸಮಗ್ರ ಅಭಿವೃದ್ಧಿಗಾಗಿ ಸುಧಾಕರ್‌ ಅವರಿಗೆ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು. 

ಇದನ್ನೂ ವೀಕ್ಷಿಸಿ: ತವರು ಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ಪ್ರಚಾರ: ಹಾವೇರಿಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ನಿರೀಕ್ಷೆ

Related Video