ಕಾದು ಕಾದು ಬೇಸರವಾಗಿ ಸಭೆಯಿಂದ ಹೊರಬಂದಿದ್ದೇವೆ: ಡಿಕೆಶಿ ವಿರುದ್ಧ ಅಶ್ವತ್ಥನಾರಾಯಣ ಅಸಮಾಧಾನ

ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಬೆಂಗಳೂರು ಅಭಿವೃದ್ಧಿ ಸಭೆ ಕರೆಯಲಾಗಿತ್ತು. ಈ ಸಭೆಗೆ ಡಿಕೆಶಿ ತಡವಾಗಿ ಬಂದ ಹಿನ್ನೆಲೆ ಬಿಜೆಪಿಯ ನಾಲ್ವರು ಶಾಸಕರು ಗೈರಾಗಿದ್ದರು.

Share this Video
  • FB
  • Linkdin
  • Whatsapp

ಬೆಂಗಳೂರು ಅಭಿವೃದ್ಧಿ ಸಭೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಕರೆಯಲಾಗಿತ್ತು. ಈ ಸರ್ವ ಪಕ್ಷ ನಾಯಕರ ಸಭೆಗೆ ಬಿಜೆಪಿಯ ನಾಲ್ವರು ಶಾಸಕರು ಗೈರಾಗಿದ್ದರು. ಅಲ್ಲದೇ ಡಿಕೆ ಶಿವಕುಮಾರ್‌ ತಡವಾಗಿ ಬಂದಿದ್ದಕ್ಕೆ ಬೇಸರವನ್ನು ವ್ಯಕ್ತಪಡಿಸಿದರು. ಇವರ ಮನವೊಲಿಸಲು ಸಚಿವ ಜಮೀರ್ ಅಹಮ್ಮದ್‌ ಮುಂದಾಗುತ್ತಾರೆ. ಅಲ್ಲದೇ ಈ ಸಭೆಗೆ ಕಾಂಗ್ರೆಸ್‌ನ ಶಾಸಕರು ಸಹ ಬಂದಿಲ್ಲ. ಬೆಂಗಳೂರು ಶಾಸಕರ ಈ ನಡೆ ಕುತೂಹಲವನ್ನು ಮೂಡಿಸಿದೆ. ಸಚಿವ ಸ್ಥಾನದ ಆಕಾಂಕ್ಷಿಗಳು ಈ ಸಭೆಗೆ ಬಂದಿಲ್ಲ. ಕೆಲವರು ಅವರಿಗೆ ಸರಿಯಾದ ಆಹ್ವಾನ ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ. ವಾಪಸ್‌ ಹೋಗಿರುವ ಬಿಜೆಪಿ ಶಾಸಕರು ಡಿಕೆಶಿ ಅವರ ಮೇಲೆ ಮುನಿಸಿಕೊಂಡು ಹೋಗಿದ್ದಾರೆ. ಎಲ್ಲ ಪಕ್ಷದ ನಾಯಕರನ್ನು ಕಾಯಿಸುವುದು ಸರಿಯಲ್ಲ. ಒಂದು ಗಂಟೆ ಕಾಯಿಸಿದ್ದಾರೆ. ಹಾಗಾಗಿ ಬಿಜೆಪಿ ಶಾಸಕರು ಹೊರ ಬಂದಿದ್ದಾರೆ ಎಂದು ಶಾಸಕ ಅಶ್ವತ್ಥನಾರಾಯಣ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ರಸ್ತೆಯಲ್ಲಿ ಮನಬಂದಂತೆ ಪುಂಡರ ವ್ಹೀಲಿಂಗ್: ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

Related Video