2 ದಿನ, 18 ಕ್ಷೇತ್ರ, 37 ಕಿ.ಮೀ ಮೋದಿ ರೋಡ್‌ ಶೋ: ಕೊನೆ ಹಂತದಲ್ಲಿ ಮತದಾರನ ಮನ ಗೆಲ್ಲಲು ರಣತಂತ್ರ

ಶನಿವಾರ, ಭಾನುವಾರ ಮೋದಿ ಮೆಗಾ ರೋಡ್ ಶೋ
ಮೋದಿ ಜೀವನದ 2ನೇ ಅತಿ ದೊಡ್ಡ ರೋಡ್‌ ಶೋ
ಗುಜರಾತ್‌ನಲ್ಲಿ 50ಕಿ.ಮೀ ರೋಡ್ ಶೋ ಮಾಡಿದ್ದ ಮೋದಿ

First Published May 5, 2023, 12:44 PM IST | Last Updated May 5, 2023, 12:44 PM IST

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮತ್ತು ಭಾನುವಾರ ಎರಡು ದಿನ ಸಿಲಿಕಾನ್‌ ಸಿಟಿಯಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ಇದಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಲಕ್ಷಾಂತರ ಜನ ಸೇರುವ ನೀರಿಕ್ಷೆ ಇದೆ. ಹೀಗಾಗಿ ರಸ್ತೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಈ ಹಿಂದೆ ಗುಜರಾತ್‌ನಲ್ಲಿ ಪ್ರಧಾನಿ ಮೋದಿ 50 ಕಿ.ಮೀ ರೋಡ್‌ ಶೋ ಮಾಡಿದ್ದರು. ಇದು ಮೋದಿ ಜೀವನದ 2ನೇ ಅತಿ ದೊಡ್ಡ ಬೃಹತ್‌ ರೋಡ್‌ ಶೋ ಆಗಿದೆ. ಎರಡು ದಿನ 18 ಕ್ಷೇತ್ರದಲ್ಲಿ 37 ಕಿಲೋ ಮೀಟರ್‌ ರೋಡ್‌ ಶೋನನ್ನು ಪ್ರಧಾನಿ ಮೋದಿ ಮಾಡಲಿದ್ದಾರೆ.

ಇದನ್ನೂ ವೀಕ್ಷಿಸಿ: ನಾಳೆ ಬಾದಾಮಿಯಲ್ಲಿ ಬಿಜೆಪಿ ಸಮಾವೇಶ: ಬನಶಂಕರಿ ದೇಗುಲ ಭೇಟಿಗೆ ಪಿಎಂಗೆ ಮನವಿ

Video Top Stories