ಈ ದಿನ ಈಶ್ವರ-ಪಾರ್ವತಿಗೆ ಪೂಜೆ ಸಲ್ಲಿಸಿ: ನಿಮ್ಮ ಸೌಭಾಗ್ಯ ವೃದ್ಧಿಗೆ ಮುತ್ತೈದೆಯರಿಗೆ ಮಂಗಲ ದ್ರವ್ಯಗಳನ್ನು ಕೊಡಿ..
ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ಯಾವ ರಾಶಿಗಳ ಭವಿಷ್ಯವೇನು?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಸೋಮವಾರ, ತೃತೀಯ ತಿಥಿ, ಮೃಗಶಿರ ನಕ್ಷತ್ರ.
ಈ ದಿನ ಸೋಮವಾರ ಹಾಗೂ ತೃತೀಯ ತಿಥಿ ಇದ್ದು, ಸೋಮವಾರ ಈಶ್ವರನ ಆರಾಧನೆ ಮಾಡುವುದು ಒಳ್ಳೆಯದು. ಇದರ ಜೊತೆಗೆ ತೃತೀಯ ತಿಥಿ ಬಂದಿರುವುದರಿಂದ ತಾಯಿ ಪಾರ್ವತಿ ದೇವಿಗೆ ಪೂಜೆ ಸಲ್ಲಿಸಿ. ಅಮ್ಮನವರಿಗೆ ಕುಂಕುಮ ಅರ್ಚನೆ ಮಾಡಿ, ಮುತ್ತೈದೆಯರನ್ನು ಕರೆದು, ಮಂಗಲ ದ್ರವ್ಯಗಳನ್ನು ಅವರಿಗೆ ನೀಡಿದ್ರೆ, ನಿಮ್ಮ ಸೌಭಾಗ್ಯ ವೃದ್ಧಿಸುತ್ತದೆ. ದಾನ ಮಾಡುವಾಗ ಅವರಿಗೆ ಇಷ್ಟವಾದದ್ದನ್ನು ಮಾಡಿ, ಇದರಿಂದ ನಿಮ್ಮ ಕಾರ್ಯ ಸಿದ್ಧಿಯಾಗುತ್ತದೆ. ನನ್ನ ಕೈಯಲ್ಲಿ ಏನು ಮಾಡಲು ಆಗುವುದಿಲ್ಲ ಎನ್ನುವರು ಒಳ್ಳೆಯ ಮನಸ್ಸಿನಿಂದ ಅರಿಶಿಣ, ಕುಂಕುಮ ಕೊಟ್ಟರೂ ಸಾಕು.
ಇದನ್ನೂ ವೀಕ್ಷಿಸಿ: Bengaluru Rain: ಅಕಾಲಿಕ ಆಲಿಕಲ್ಲು ಮಳೆಗೆ ತತ್ತರಿಸಿದ ಜನ, ಧರೆಗುರುಳಿದ ಮರಗಳು