Panchang: ಇಂದು ಚೈತ್ರ ಸಪ್ತಮಿ, ಸಂತಾನ ಸಂಬಂಧಿ ಫಲಕ್ಕಾಗಿ ಈ ಆರಾಧನೆ ಮಾಡಿ..
ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಮಂಗಳವಾರ, ಸಪ್ತಮಿ ತಿಥಿ, ಮೃಗಶಿರ ನಕ್ಷತ್ರ.
ಚೈತ್ರ ಮಾಸದ ಸಪ್ತಮಿಯನ್ನು ಸಂತಾನ ಸಪ್ತಮಿ ಎಂದೂ, ಆರೋಗ್ಯ ಸಪ್ತಮಿ ಎಂದೂ ಆಚರಿಸಲಾಗುತ್ತದೆ. ಈ ತಿಥಿಯಲ್ಲಿ ಸೂರ್ಯನ ಆರಾಧನೆ ಮಾಡಬೇಕು. ಇದರಿಂದ ಆರೋಗ್ಯ ವರ್ಧನೆಯಾಗುತ್ತದೆ. ಜೊತೆಗೆ ಸಂತಾನಲಕ್ಷ್ಮೀ ಹಾಗೂ ಬಾಲ ಗಣಪತಿ ಆರಾಧನೆಯಿಂದ ಸಂತಾನ ಸಂಬಂಧಿ ಸಮಸ್ಯೆಗಳನ್ನೂ ನೀಗಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ.