Panchang: ಇಂದು ಜೇಷ್ಠ ನಕ್ಷತ್ರ, ಸುಬ್ರಹ್ಮಣ್ಯನ ಆರಾಧನೆ ಮಾಡಿ..
ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಸೋಮವಾರ, ಸಪ್ತಮಿ ತಿಥಿ, ಜೇಷ್ಠ ನಕ್ಷತ್ರ.
ಜೇಷ್ಠ ನಕ್ಷತ್ರವನ್ನು ವರ್ಜ್ಯವೆಂದು ಶಾಸ್ತ್ರಗಳಲ್ಲಿ ಹೇಳಲಾಗುತ್ತದೆ. ಆದರೆ, ಈ ನಕ್ಷತ್ರದಲ್ಲಿ ಹಾಗೂ ಮಂಗಳವಾರದಂದು ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಿದರೆ ಫಲ ಹೆಚ್ಚು. ಅಲ್ಲದೆ, ಇಂದು ಅಮ್ಮನವರ ಸನ್ನಿಧಾನದಲ್ಲಿ ಎಳ್ಳೆಣ್ಣೆ, ತೊಗರಿ ದಾನ ಮಾಡಲು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ಸಲಹೆ ನೀಡಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ.