ದುರ್ಯೋಧನನ ಏಕೈಕ ಸಹೋದರಿಯ ಪತಿ ಅರ್ಜುನನಿಂದ ಮಡಿದ! ಯಾರಾತ?
ದುರ್ಯೋಧನನಿಗೆ 99 ಸಹೋದರರಿದ್ದರು ಎಂದು ಎಲ್ಲರಿಗೂ ತಿಳಿದಿದೆ, ಆದರೆ ಅವನಿಗೆ ಒಬ್ಬ ಸಹೋದರಿ ಇದ್ದಳು ಎಂಬುದು ಕೆಲವೇ ಜನರಿಗೆ ತಿಳಿದಿದೆ. ದುರ್ಯೋಧನನ ಸಹೋದರಿಯ ಪತಿಯೂ ಮಹಾನ್ ವೀರ, ಆತ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ಕೈಯಲ್ಲಿ ಮಡಿದ.
ಮಹಾಭಾರತದಲ್ಲಿ ಸಾವಿರಾರು ಪಾತ್ರಗಳಿವೆ, ಆದರೆ ಅವುಗಳಲ್ಲಿ ಕೆಲವೇ ಕೆಲವು ನಮಗೆ ತಿಳಿದಿದೆ. ಮಹಾಭಾರತದ ಕೆಲವು ಪಾತ್ರಗಳ ಬಗ್ಗೆಯಂತೂ ಹೆಚ್ಚು ಬರೆಯಲಾಗಿಲ್ಲ, ಕಲವೊಂದು ಬರೆದಿದ್ದರೂ ಅವು ಕಡೆಗಣನೆಯಾಗಿವೆ. ದುರ್ಯೋಧನನ ಸಹೋದರಿ ಕೂಡ ಮಹಾಭಾರತದ ಅಂತಹ ಪಾತ್ರಗಳಲ್ಲಿ ಒಂದಾಗಿದೆ, ಅವಳ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ.
ಹೌದು, ದುರ್ಯೋಧನನಿಗೆ 99 ಸಹೋದರರಿದ್ದರು ಎಂದು ಎಲ್ಲರಿಗೂ ತಿಳಿದಿದೆ, ಆದರೆ ಅವನಿಗೆ ಒಬ್ಬ ಸಹೋದರಿ ಇದ್ದಳು ಎಂಬುದು ಕೆಲವೇ ಜನರಿಗೆ ತಿಳಿದಿದೆ. ದುರ್ಯೋಧನನ ಸಹೋದರಿಯ ಪತಿಯೂ ಮಹಾನ್ ವೀರ, ಒಮ್ಮೆ ಪಾಂಡವರ ವಶದಲ್ಲಿದ್ದನು. ಅವನು ಅರ್ಜುನನ ಕೈಯಲ್ಲಿ ಯುದ್ಧದಲ್ಲಿ ಮರಣ ಹೊಂದಿದನು. ದುರ್ಯೋಧನನ ಸಹೋದರಿಗೆ ಸಂಬಂಧಿಸಿದ ಮತ್ತಷ್ಟು ಆಸಕ್ತಿದಾಯಕ ವಿಷಯಗಳನ್ನು ತಿಳಿಯಿರಿ.
ದುರ್ಯೋಧನನ ಸಹೋದರಿ ಹುಟ್ಟಿದ್ದು ಹೀಗೆ..
ಮಹಾಭಾರತದ ಪ್ರಕಾರ, ಒಮ್ಮೆ ಮಹರ್ಷಿ ವೇದವ್ಯಾಸರ ಆಶೀರ್ವಾದದೊಂದಿಗೆ, ಗಾಂಧಾರಿ ಗರ್ಭ ಧರಿಸಿದಳು. ಆದರೆ ಬಹಳ ಸಮಯದ ನಂತರವೂ ಯಾವುದೇ ಮಗು ಜನಿಸಲಿಲ್ಲ. ಇದಾದ ನಂತರ ಗಾಂಧಾರಿಯ ಗರ್ಭದಿಂದ ಕಬ್ಬಿಣದಂತಹ ರಾಶಿ ಹೊರ ಬಂತು. ಆಗ ಮಹರ್ಷಿ ವೇದವ್ಯಾಸರು ಆ ಶರೀರದ ಮೇಲೆ ನೀರನ್ನು ಚಿಮುಕಿಸಿ ಅದನ್ನು 101 ಭಾಗಗಳಾಗಿ ವಿಂಗಡಿಸಿದರು. ಮಹರ್ಷಿಗಳ ಆಜ್ಞೆಯಂತೆ ಗಾಂಧಾರಿ ತುಪ್ಪವನ್ನು ತುಂಬಿದ ವಿವಿಧ ಪಾತ್ರೆಗಳಲ್ಲಿ ಆ ಭಾಗಗಳನ್ನು ಹಾಕಿದಳು. ಆ ಕುಂಡಗಳಿಂದ ಗಾಂಧಾರಿಗೆ 100 ಗಂಡು ಮಕ್ಕಳು ಮತ್ತು ಓರ್ವ ಮಗಳು ಜನಿಸಿದರು.
ರಾಶಿ ಬದಲಿಸಿದ ಶುಕ್ರ -ಮಂಗಳ ಗ್ರಹ : ಈ ರಾಶಿಗಳಿಗೆ ಲಕ್ ಗ್ಯಾರಂಟಿ
ದುರ್ಯೋಧನನ ತಂಗಿಯ ಹೆಸರೇನು?
ಮಹಾಭಾರತದಲ್ಲಿ ಮತ್ತು ಇತರ ಗ್ರಂಥಗಳಲ್ಲಿ ದುರ್ಯೋಧನನ ಸಹೋದರಿಯ ಹೆಚ್ಚಿನ ವಿವರಣೆಯಿಲ್ಲ, ಅವಳ ಹೆಸರನ್ನು ಮಾತ್ರ ಉಲ್ಲೇಖಿಸಲಾಗಿದೆ. ದುರ್ಯೋಧನನ ಸಹೋದರಿಯ ಹೆಸರು ದುಶ್ಯಲಾ, ಅವಳು ಕಿರಿಯಳು. ಪಾಂಡವರು ದುಶ್ಯಲಳನ್ನು ತಮ್ಮ ಸ್ವಂತ ಸಹೋದರಿಯಂತೆ ಪ್ರೀತಿಸುತ್ತಿದ್ದರು. ಈ ಕಾರಣಕ್ಕಾಗಿ, ಒಮ್ಮೆ ಯುಧಿಷ್ಠಿರನು ದುಶ್ಯಲೆಯ ಗಂಡನಿಗೆ ಜೀವಾವಧಿ ಶಿಕ್ಷೆಯನ್ನು ನೀಡಿ ಜೀವಂತವಾಗಿ ಬಿಟ್ಟಿದ್ದನು.
ದುಶ್ಯಲಾ ಯಾರೊಂದಿಗೆ ಮದುವೆಯಾದಳು?
ದುಶ್ಯಲಳು ಸಿಂಧು ದೇಶದ ರಾಜ ಜಯದ್ರಥನನ್ನು ವಿವಾಹವಾದಳು. ಜಯದ್ರಥನು ಬಹಳ ಪರಾಕ್ರಮಶಾಲಿಯಾಗಿದ್ದನು. ಒಮ್ಮೆ ಕಾಡಿನಲ್ಲಿ ಒಬ್ಬಂಟಿಯಾಗಿರುವ ದ್ರೌಪದಿಯನ್ನು ಕಂಡು ಆಕೆಯನ್ನು ಅಪಹರಿಸಲು ಬಯಸಿದನು. ಕೋಪಗೊಂಡ ಪಾಂಡವರು ಅವನನ್ನು ಕೊಲ್ಲಲಿಲ್ಲ. ಆದರೆ ಅವನ ತಲೆಯನ್ನು ಬೋಳಿಸಿ ಅದರ ಮೇಲೆ ಐದು ಜಡೆಗಳನ್ನು ಬಿಟ್ಟರು. ಆದರೆ, ಕುರುಕ್ಷೇತ್ರ ಯುದ್ಧದಲ್ಲಿ ಜಯದ್ರತನು ಅರ್ಜುನನ ಮಗನನ್ನು ಸಂಹರಿಸಿದ್ದು ತಿಳಿಯುತ್ತಲೇ ಕೋಪಗೊಂಡ ಅರ್ಜುನನು ಜಯದ್ರತನನ್ನು ಸಂಹರಿಸಿದನು.
Astrology Tips: ಮಿಲಿಯನೇರ್ ಆಗಬೇಕಾ? ಪರ್ಸ್‌ನಲ್ಲಿ ಈ ವಸ್ತು ಇರಿಸಿ..
ದುಶ್ಯಲಳ ಮೊಮ್ಮಗನಿಗೆ ಅರ್ಜುನ ಜೀವದಾನ ಕೊಟ್ಟಾಗ
ಕುರುಕ್ಷೇತ್ರ ಯುದ್ಧವನ್ನು ಗೆದ್ದ ನಂತರ, ಯುಧಿಷ್ಠಿರನು ಅಶ್ವಮೇಧ ಯಾಗವನ್ನು ಮಾಡಿದನು. ಅರ್ಜುನನನ್ನು ಆ ಕುದುರೆಯ ಕಾವಲುಗಾರನನ್ನಾಗಿ ಮಾಡಲಾಯಿತು. ಈ ಕುದುರೆ ಸಿಂಧು ದೇಶಕ್ಕೆ ತಿರುಗಾಡುತ್ತಾ ಬಂದಿತು. ಅಲ್ಲಿಗೆ ತಲುಪಿದ ನಂತರ, ಅರ್ಜುನನು ಯುದ್ಧಕ್ಕೆ ಸವಾಲು ಹಾಕಿದನು. ದುಶ್ಯಲೆಯ ಮಗ ಸುರಥನೆಂಬವನಿದ್ದ. ಆತನ ಮಗ, ದುಶ್ಯಲೆಯ ಮೊಮ್ಮಗ ಈ ಯುದ್ಧದಲ್ಲಿ ಅರ್ಜುನನೊಂದಿಗೆ ಹೋರಾಡಿದ. ಈ ಸಂದರ್ಭದಲ್ಲಿ ದುಶ್ಯಲ ಯುದ್ಧಭೂಮಿಗೆ ಬಂದಳು. ಅರ್ಜುನನು ತನ್ನ ತಂಗಿಯನ್ನು ನೋಡಿ ಎದೆಗುಂದಿದನು. ಏಕೆಂದರೆ ಅರ್ಜುನನು ಯಾವಾಗಲೂ ದುರ್ಯೋಧನನ ಸಹೋದರಿಯನ್ನು ತನ್ನ ಸಹೋದರಿಯೆಂದು ಪರಿಗಣಿಸಿದ್ದನು. ಅರ್ಜುನನು ತನ್ನ ತಂಗಿಯ ಕುಟುಂಬಕ್ಕೆ ಜೀವದಾನ ಕೊಟ್ಟು, ಆ ಹುಡುಗನನ್ನು ಸಿಂಧು ದೇಶದ ರಾಜನಾಗಿಸಿ ಮುಂದೆ ಹೋದನು.