Today Rashibhavishy: ಇಂದಿನಿಂದ ಕೃಷ್ಣ ಪಕ್ಷ ಆರಂಭವಾಗುತ್ತಿದ್ದು, ಈ ದಿನದ ನಿಮ್ಮ ಭವಿಷ್ಯ ಹೀಗಿದೆ..
ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಮಂಗಳವಾರ, ಪ್ರತಿಪತ್ ತಿಥಿ, ಪೂರ್ವಾಷಾಢ ನಕ್ಷತ್ರ.
ಈ ದಿನ ಮಂಗಳವಾರವಾಗಿದ್ದು, ಇಂದಿನಿಂದ ಕೃಷ್ಣ ಪಕ್ಷ ಆರಂಭವಾಗಿದೆ. ಕೃಷ್ಣ ಪಕ್ಷ ಕ್ಷೀಣ ಚಂದ್ರನನ್ನು ಸೂಚಿಸುತ್ತದೆ. ಹೇಗೆ ಚಂದ್ರ ಅಮಾವಾಸ್ಯೆ ಬರುತ್ತಿದ್ದಂತೆ ಕ್ಷೀಣಿಸುತ್ತಾ ಹೋಗುತ್ತಾನೋ, ಹಾಗೆಯೇ ಅಮಾವಾಸ್ಯೆ ಸಮೀಪದಲ್ಲಿ ಹುಟ್ಟಿದವರು ಕ್ಷೀಣಿಸುತ್ತಾ ಹೋಗುತ್ತಾರೆ. ಇದಕ್ಕೆ ಕಾರಣ ನಾವು ತಿನ್ನುವ ಆಹಾರ ಮತ್ತು ಚಂದ್ರ. ಈ ಸಮಯದಲ್ಲಿ ಬೇಡವಾದ ಯೋಚನೆಗಳು ನಮ್ಮ ಮನಸ್ಸಿಗೆ ಬರುತ್ತಾ ಹೋಗುತ್ತವೆ.
ಇದನ್ನೂ ವೀಕ್ಷಿಸಿ: ಬಿಜೆಪಿ ಒಡೆದ ಮನೆ, ವಿರೋಧ ಪಕ್ಷದಲ್ಲಿ ಕೂತ ಮೇಲಂತೂ ಮುನ್ನೂರು ಬಾಗಿಲಾಗಿದೆ : ಪ್ರಿಯಾಂಕ ಖರ್ಗೆ