ಬಿಜೆಪಿ ಒಡೆದ ಮನೆ, ವಿರೋಧ ಪಕ್ಷದಲ್ಲಿ ಕೂತ ಮೇಲಂತೂ ಮುನ್ನೂರು ಬಾಗಿಲಾಗಿದೆ : ಪ್ರಿಯಾಂಕ ಖರ್ಗೆ
ಬಿಜೆಪಿ ಮನೆ ಮೊದಲು ಮೂರು ಬಾಗಿಲು ಆಗಿತ್ತು. ಈಗ ಮುನ್ನೂರು ಬಾಗಿಲು ಆಗಿದೆ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಬೆಂಗಳೂರು: YST ಮತ್ತು VST ಟ್ಯಾಕ್ಸ್ ಬಗ್ಗೆ ಸಾಕ್ಷಿಗಳು ಇದ್ದರೆ ಕೊಡಲಿ. ಅದರ ಬಗ್ಗೆ ನಾವು ತನಿಖೆ ಮಾಡ್ತೀವಿ. YST ಅಂದ್ರೆ ಏನು ಅನ್ನೊದರ ಬಗ್ಗೆ ಮೊದಲು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಲಿ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಹಿರಿಯರಿದ್ದಾರೆ ನೋಡಿಕೊಂಡು ಮಾತಾಡಬೇಕು. ಸುಮ್ಮನೆ ಹಿಟ್ ಆಂಡ್ ರನ್ ಬೇಡ. ಮೊದಲು ವಿಪಕ್ಷ ನಾಯಕರು ಯಾರು ಅನ್ನೋದು ಬಿಜೆಪಿ ನಿರ್ಧಾರ ಮಾಡ್ಲಿ. ಬಿಜೆಪಿ ಅಧಿಕಾರದಲ್ಲಿದ್ದಾಗ್ಲೆ ಮನೆಯೊಂದು ಮೂರು ಬಾಗಿಲು ಆಗಿತ್ತು. ಈಗ ವಿಪಕ್ಷದಲ್ಲಿದ್ದಾಗ ಬಿಜೆಪಿ ಮನೆ ನೂರು ಬಾಗಿಲಾಗಿದೆ. ಮೊದಲು ಬಿಜೆಪಿ ವಿಪಕ್ಷ ನಾಯಕರ ಯಾರು ಎಂದು ತೀರ್ಮಾನ ಮಾಡಲಿ. ಆಮೇಲೆ ನಮ್ಮ ಗ್ಯಾರಂಟಿ ಬಗ್ಗೆ ಮಾತನಾಡಲಿ ಎಂದು ಪ್ರಿಯಾಂಕ ಖರ್ಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ವೀಕ್ಷಿಸಿ: ಹೊಸ ಬಾಂಬ್ ಸಿಡಿಸಿದ ಹೆಚ್‌ಡಿಕೆ: '30 ಲಕ್ಷ ಕೊಡದಿದ್ರೆ ಸಿಎಂ ಕಚೇರಿಯಲ್ಲಿ ಕೆಲಸವೇ ಆಗಲ್ಲ'