Asianet Suvarna News Asianet Suvarna News
breaking news image

ಐಎಎಸ್ ಅಧಿಕಾರಿಗಳ ದುರ್ಬಳಕೆ, ದಲಿತ ಅಸ್ತ್ರ ಹಿಡಿದು ಬಿಜೆಪಿ-ಕಾಂಗ್ರೆಸ್ ಹೋರಾಟ!

ಐಎಎಸ್ ಅಧಿಕಾರಿಗಳ ದುರ್ಬಳಕೆ ವಿಚಾರ ಹಿಡಿದು ಬಿಜೆಪಿ ಹೋರಾಟ ತೀವ್ರಗೊಳಿಸಿದೆ. ಇತ್ತ ಬಿಜೆಪಿ ಹಣಿಯಲು ಕಾಂಗ್ರೆಸ್ ದಲಿತ ಅಸ್ತ್ರ ಪ್ರಯೋಗಿಸಿದೆ. ಈಗಾಗಲೇ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದರೆ ಇತ್ತ ಕಾಂಗ್ರೆಸ್ ಜಾತಿ ಹಗ್ಗಜಗ್ಗಾಟ ಆರಂಭಿಸಿದೆ. ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ

ವಿಪಕ್ಷಗಳ ಕಾರ್ಯಕ್ರಮಕ್ಕೆ ಐಎಎಸ್ ಅಧಿಕಾರಿಗಳ ದುರ್ಬಳಕೆ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ತೀವ್ರ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ಇಂದು ರಾಜ್ಯಪಾಲರಿಗೆ ದೂರು ನೀಡಿದೆ.ಇತ್ತ ಬಿಜೆಪಿ ವಿರುದ್ಧ ಕಾಂಗ್ರೆಸ್ ದಲಿತ ಅಸ್ತ್ರ ಬಳಸಿದೆ. ಸಭಾಧ್ಯಕ್ಷರ ಮುಖದ ಮೇಲೆ ಮಸೂದೆ ಪ್ರತಿ ಹರಿದು ಹಾಕಿದ ಪ್ರಕರಣ ಮುಂದಿಟ್ಟುಕೊಂಡು ಕಾಂಗ್ರೆಸ್ ದಲಿತರಿಗೆ ಅಪಮಾನ ಅನ್ನೋ ಹೋರಾಟ ಆರಂಭಿಸಿದೆ. ಇತ್ತ ದಲಿತ ಅಸ್ತ್ರಕ್ಕೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. ಇತ್ತ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಕೂಡ ಹರಿಹಾಯ್ದಿದ್ದಾರೆ.

Video Top Stories