Today Horoscope: ಇಂದು ಮಿಥುನ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲ, ಒಳಿತಿಗಾಗಿ ಶಿವ ಕವಚ ಪಠಿಸಿ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

Share this Video
  • FB
  • Linkdin
  • Whatsapp

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ, ಶನಿವಾರ, ದಶಮಿ ತಿಥಿ, ಮೂಲ ನಕ್ಷತ್ರ.

ಈ ದಿನ ಶ್ರಾವಣ ಶನಿವಾರವಾಗಿದ್ದು, ವಿಷ್ಣುವಿನ ಹಾಗೂ ಆಂಜನೇಯ ಸ್ವಾಮಿ ಪ್ರಾರ್ಥನೆ ಮಾಡಿ. ಆಂಜನೇಯ ಸ್ವಾಮಿಗೆ ವಿಳ್ಳೆದೆಲೆ ಹಾರವನ್ನು ಹಾಕಿ. ವಿಷ್ಣುಗೆ ತುಳಸಿ ಸಮರ್ಪಣೆ ಮಾಡಿ. ಮಿಥುನ ರಾಶಿಯವರಿಗೆ ವೃತ್ತಿ, ವಿದ್ಯಾಭ್ಯಾಸದಲ್ಲಿ ಅನುಕೂಲವಾಗಲಿದ್ದು, ಹಿರಿಯರ ಮಾರ್ಗದರ್ಶನ ದೊರೆಯಲಿದೆ. ಇಂದು ಈ ರಾಶಿಯವರಿಗೆ ಕಿವಿ ಸಂಬಂಧಿ ತೊಂದರೆ ಬರುವ ಸಾಧ್ಯತೆ ಇದೆ. ಶಿವ ಕವಚ, ಆದಿತ್ಯ ಹೃದಯ ಪಠಿಸಿ.

ಇದನ್ನೂ ವೀಕ್ಷಿಸಿ:  News Hour: ಹೀಯಾಳಿಸಿದವರೇ ಎದುರೇ ಹೆಮ್ಮರವಾಗಿ ಬೆಳೆದು ನಿಂತ ಭಾರತದ ಇಸ್ರೋ!

Related Video