ಪಂಚಾಂಗ: ಪಿತೃ ದೇವತೆಗಳ ಸ್ಮರಣೆಗೆ ಬಹಳ ವಿಶಿಷ್ಟ ದಿನ!
22 ಮೇ 2020, ಶುಕ್ರವಾರದ ಪಂಚಾಂಗ| ಈ ಮಾಸದ, ಈ ಋತುವಿನ ಕೊನೆಯ ದಿನ. ವಸಂತ ಋತುವಿನಿಂದ ಗ್ರೀಷ್ಮ ಋತುವಿಗೆ ಪ್ರವೇಶಿಸುವ ಕಾಲ. ಗ್ರೀಷ್ಮ ಬೆಂಕಿ ಪ್ರತಿಪಾದಿಸುವ ಋತು. ಈ ಋತುವಿಗೆ ಕುಜ ಅಧಿಪತಿ. ಈ ಮಾಸದ ಕೊನೆಯ ದಿನವಾದ ಇಂದು, ಅಮವಾಸ್ಯೆಯ ಶುಕ್ರವಾರ ಬಂದಿದ್ದು, ಉತ್ತಮ. ಮಹಾಲಕ್ಷ್ಮಿ ಪ್ರಾರ್ಥನೆಗೆ, ಪಿತೃ ದೇವತೆಗಳ ಸ್ಮರಣೆಗೆ ಬಹಳ ವಿಶಿಷ್ಟ ದಿನ. ಅವರಿಗಿಂದು ಬಹಳ ಹೆಚ್ಚಿನ ಬಲವಿರುತ್ತದೆ. ಅವರ ಸ್ಮರಣೆ ಮಾಡಿದರೆ, ಅವರ ಅನುಗ್ರಹದಿಂದ ಮನೋ ಸಂಕಲ್ಪ ಸಿದ್ಧಿಯಾಗುತ್ತದೆ. ದೇವತೆಗಳಿಗಿಂತಲೂ ಹೆಚ್ಚು ವಿಶಿಷ್ಟ ಶಕ್ತಿ ಅನುಗ್ರಹಿಸಲು ಶಕ್ತಿ ಹೊಂದಿರುವವರು ಪಿತೃ ದೇವತೆಗಳು. ಹೀಗಾಗಿ ಕಾಲವ್ಯಯ ಮಾಡದೆ ಪಿತೃದೇವತೆಗಳನ್ನು ಆರಾಧಿಸಿ.