Indian National Basketball League: ಬಾಸ್ಕೆಟ್‌ಬಾಲ್ ಹಬ್ ಆಗಲಿದೆ ಕರ್ನಾಟಕ..!

ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಐಎನ್‌ಬಿಎಲ್ ಟೂರ್ನಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಯುವಜನರಲ್ಲಿ ಕ್ರೀಡೆಯ ಮೇಲಿನ ಆಸಕ್ತಿ , ಹುಮ್ಮಸ್ಸು ಜಾಸ್ತಿಯಾಗಬೇಕು. ಬಾಸ್ಕೆಟ್‌ಬಾಲ್ ಯಶಸ್ಸಿಗೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ಸರ್ಕಾರದ ವತಿಯಿಂದ ನೀಡಲಿದ್ದೇವೆ ಎಂದು ಲೀಗ್‌ಗೆ ಶುಭಹಾರೈಸಿದರು.

Share this Video
  • FB
  • Linkdin
  • Whatsapp

ಬೆಂಗಳೂರು: ಕೊರೋನಾ (Coronavirus) ಕಂಟಕ ಕಡಿಮೆಯಾಗುತ್ತಿದ್ದಂತೆಯೇ ಕ್ರೀಡಾ ಚಟುವಟಿಕೆಗಳು ಗರಿಗೆದರಲಾರಂಭಿಸಿವೆ. ಐಪಿಎಲ್‌(IPL), ಟಿ20 ವಿಶ್ವಕಪ್ (T20 WorldCup) ಬಳಿಕ ಕ್ರೀಡಾಲೋಕದಲ್ಲಿ ಮಿಂಚಿನ ಸಂಚಾರ ಮೂಡಿಸಲು ಇಂಡಿಯನ್ ನ್ಯಾಷನಲ್ ಬಾಸ್ಕೆಟ್‌ಬಾಲ್ ಲೀಗ್ (ಐಎನ್‌ಬಿಎಲ್) (Indian National Basketball League) ಆರಂಭವಾಗಲಿದೆ. ಈ ಮೂಲಕ ಕರ್ನಾಟಕ ಬಾಸ್ಕೆಟ್‌ಬಾಲ್ ಹಬ್ ಆಗುವತ್ತ ದಿಟ್ಟ ಹೆಜ್ಜೆಯಿಟ್ಟಿದೆ. 

Add Asianetnews Kannada as a Preferred SourcegooglePreferred

ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ (Sri Kanteerava Stadium) ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaj Bommai), ಐಎನ್‌ಬಿಎಲ್ ಟೂರ್ನಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಯುವಜನರಲ್ಲಿ ಕ್ರೀಡೆಯ ಮೇಲಿನ ಆಸಕ್ತಿ , ಹುಮ್ಮಸ್ಸು ಜಾಸ್ತಿಯಾಗಬೇಕು. ಬಾಸ್ಕೆಟ್‌ಬಾಲ್ (Basketball) ಯಶಸ್ಸಿಗೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ಸರ್ಕಾರದ ವತಿಯಿಂದ ನೀಡಲಿದ್ದೇವೆ ಎಂದು ಲೀಗ್‌ಗೆ ಶುಭಹಾರೈಸಿದರು.

Indian National Basketball League: ರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ಲೀಗ್‌ ಉದ್ಘಾಟನೆ

ಇನ್ನು ನಟ ಯಶ್‌ (Yash) ಮಾತನಾಡಿ, ನಾವು ಆರೋಗ್ಯವಾಗಿರಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಐಎನ್‌ಬಿಎಲ್‌ ಟೂರ್ನಿಯ ಮೂಲಕ ದೇಶದಲ್ಲಿ ಬಾಸ್ಕೆಟ್‌ಬಾಲ್ ಸಂಸ್ಕೃತಿ ಮತ್ತಷ್ಟು ಬೆಳೆಯಬೇಕು ಎಂದು ಟೂರ್ನಿಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಬಾಸ್ಕೆಟ್‌ಬಾಲ್ ಫೆಡರೇಷನ್ ಆಫ್‌ ಇಂಡಿಯಾದ ಅಧ್ಯಕ್ಷ ಕೆ. ಗೋವಿಂದರಾಜು, ರಾಜ್ಯಪಾಲ ತಾವರ್‌ಚಂದ್ ಗೆಹಲೋತ್, ಕ್ರೀಡಾಸಚಿವ ನಾರಾಯಣ ಗೌಡ ಉಪಸ್ತಿತರಿದ್ದರು.

Related Video