ಯುವತಿಯ ಮೊಬೈಲ್ ಎಗರಿಸಿದ ಕಳ್ಳ: ಸೂಪರ್ ಹೀರೋಸ್ ಕೈಯಲ್ಲಿ ಸಿಕ್ಕಿಬಿದ್ದಿದ್ದು ಹೇಗೆ?

ಕಳ್ಳನೊಬ್ಬ ನೋಡ ನೋಡುತ್ತಿದ್ದಂತೆ ಯುವತಿಯ ಮೊಬೈಲ್‌ ಎಗರಿಸಿದ್ದು, ರಿಯಲ್ ಹೀರೋಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ.

Share this Video
  • FB
  • Linkdin
  • Whatsapp

ಯುವತಿಯೊಬ್ಬಳು ಮೊಬೈಲ್‌ ನೋಡುತ್ತಾ ಬಸ್‌ ಟಾಪ್‌'ನಲ್ಲಿ ಬಸ್‌'ಗಾಗಿ ಕಾಯುತ್ತಾ ಇದ್ದಳು. ಸೈಕಲ್‌'ನಲ್ಲಿ ಬಂದ ಕಳ್ಳ, ಯುವತಿಯ ಮೊಬೈಲ್‌ ಕದ್ದು ಪರಾರಿಯಾಗಬೇಕು ಅನ್ನುವಷ್ಟರಲ್ಲಿ ರಿಯಲ್‌ ಹೀರೋನ ಎಂಟ್ರಿಯಾಗಿತ್ತು. ಮೊಬೈಲ್‌ ಕಿತ್ತು ತಗೊಂಡು ಹೋಗುತ್ತಿರುವುದನ್ನು ಗಮನಿಸಿದ ಕಾರು ಚಾಲಕ, ಕಳ್ಳನ ಮೇಲೆ ಕಾರು ಹತ್ತಿಸಿ ಬಿಟ್ಟ. ಆದರೂ ಹೆದರದ ಕಳ್ಳ ಅಲ್ಲಿಂದ ಎದ್ದು ಓಡುವುದಕ್ಕೆ ಮುಂದಾಗಿದ್ದ. ಈ ವೇಳೆ ಯುವತಿ ಹಾಗೂ ಕಾರು ಚಾಲಕ ಕಳ್ಳನ ಹಿಂದೆ ಓಡಿದ್ದಾರೆ. ಈ ಸಂದರ್ಭದಲ್ಲಿ ಮತ್ತೊಂದು ಹೀರೋನ ಎಂಟ್ರಿ ಆಗಿತ್ತು. ಹೀಗೆ ಬಂದ ಹೀರೋ ಫಿಲ್ಮಿ ಸ್ಟೈಲ್‌'ನಲ್ಲಿ ಪಂಚ್‌ ಕೊಟ್ಟಿದ್ದ. ಆಗ ಕಳ್ಳ ರಸ್ತೆ ಮೇಲೆ ಬಿದ್ದಿದ್ದ. ಅಷ್ಟರಲ್ಲಿ ಇನ್ನೊಬ್ಬ ಹೀರೋ ಎಂಟ್ರಿಯಾಗಿತ್ತು. ಹೀಗೆ ಸೈಕಲ್‌ನಲ್ಲಿ ಬಂದ ಯುವಕನಿಗೆ ಜಾಡಿಸಿ ಒದ್ದಿದ್ದು, ತಪ್ಪಿಸಿಕೊಳ್ಳಲು ಆಗದ ಕಳ್ಳ ರಿಯಲ್‌ ಹೀರೋಗಳ ಕೈಗೆ ಸಿಕ್ಕಿ ಬಿದ್ದಿದ್ದ. ಇನ್ನು ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಕತ್‌ ವೈರಲ್‌ ಆಗುತ್ತಿದೆ. ರಸ್ತೆಯಲ್ಲಿ ಮೊಬೈಲ್‌ ಉಪಯೋಗಿಸುವ ಮುನ್ನ ಎಚ್ಚರ ವಹಿಸುವುದು ಅಗತ್ಯವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Astro Tips: ನಿಮ್ಮ ಅದೃಷ್ಟ ಬದಲಿಸಬಲ್ಲದು ಒಂದೇ ಒಂದು ಕಮಲ

Related Video