Asianet Suvarna News Asianet Suvarna News

Astro Tips: ನಿಮ್ಮ ಅದೃಷ್ಟ ಬದಲಿಸಬಲ್ಲದು ಒಂದೇ ಒಂದು ಕಮಲ

ಬಲಗಾಲೊದ್ದು ಲಕ್ಷ್ಮಿ ಮನೆಗೆ ಬರಬೇಕೆಂದು ಎಲ್ಲರೂ ಬಯಸ್ತಾರೆ. ಅದಕ್ಕೆ ಇನ್ನಿಲ್ಲದ ಪ್ರಯತ್ನ ನಡೆಸ್ತಾರೆ. ಲಕ್ಷ್ಮಿಗೆ ಪ್ರಿಯವಾದ ವಸ್ತುಗಳಲ್ಲಿ ಒಂದಾದ ಕಮಲದ ಹೂ ಕೂಡ ಆರ್ಥಿಕ ವೃದ್ಧಿಗೆ ದಾರಿ ಮಾಡಿಕೊಡುತ್ತದೆ. ಅದನ್ನು ಬಳಸುವ ವಿಧಾನ ತಿಳಿದಿರಬೇಕು. 

Astro Tips: One Lotus Can Bring You Luck And It Will Competely Change Your Life
Author
First Published Nov 20, 2022, 4:13 PM IST

ಸುಂದರ ಹೂಗಳಲ್ಲಿ ಕಮಲದ ಹೂ ಕೂಡ ಒಂದು. ನೀರಿನಲ್ಲಿ ಬೆಳೆಯುವ ಈ ಹೂ ನೈಸರ್ಗಿಕ ಪ್ರಾಮುಖ್ಯತೆ ಜೊತೆಗೆ ಜ್ಯೋತಿಷ್ಯ ಮತ್ತು ಧಾರ್ಮಿಕ ಮಹತ್ವ ಹೊಂದಿದೆ.  ಕಮಲದ ಹೂ ತಾಯಿ ಲಕ್ಷ್ಮಿಯ ಆಸನಾದ್ರೆ, ವಿಷ್ಣು ಕೈನಲ್ಲಿ ಹಿಡಿದಿರುವ ಹೂವಾಗಿದೆ. ಕಮಲ (Lotus) ದ ಹೂ (Flower) ವಿಗೆ ಹಣವನ್ನು ಆಕರ್ಷಿಸುವ ಸಾಮರ್ಥ್ಯವಿದೆ. ಕಮಲದ ಹೂವಿನಿಂದ ಕೆಲ ಉಪಾಯಗಳನ್ನು ಮಾಡಿದ್ರೆ ಆರ್ಥಿಕ (Financial) ಲಾಭವಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅಲ್ಲದೆ ಜೀವನದ ಅಸಂಖ್ಯಾತ ತೊಂದರೆಗಳನ್ನು ನಿವಾರಿಸುತ್ತದೆ.   

ಆರ್ಥಿಕ ವೃದ್ಧಿಗೆ ಕಮಲದ ಹೂ : ತಾಯಿ ಲಕ್ಷ್ಮಿ (Lakshmi ) ಗೆ ಕಮಲದ ಹೂವು ಇಷ್ಟ. ಪ್ರತಿ ಶುಕ್ರವಾರ ಕಮಲದ ಹೂವನ್ನು ಖರೀದಿಸಿ ಮತ್ತು ಅದನ್ನು ತಾಯಿ ಲಕ್ಷ್ಮಿಯ ಪಾದಗಳಿಗೆ ಅರ್ಪಿಸಬೇಕು. ಸತತ ಐದು ಶುಕ್ರವಾರಗಳ ಕಾಲ ನೀವು ಹೀಗೆ ಮಾಡಿದ್ರೆ ಶುಭ ಫಲ ಸಿಗುತ್ತದೆ.   ಹಣಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಗೆ ಇದ್ರಿಂದ ಪರಿಹಾರ ಸಿಗುತ್ತದೆ.  

ಪೂಜೆಯಲ್ಲಿ ಗರುಡ ಗಂಟೆಯನ್ನು ಏಕೆ ಬಳಸಬೇಕು?

ಸಂತಾನ ಪ್ರಾಪ್ತಿಗೆ ಕಮಲದ ಹೂ ಬಳಸಿ : ಏಕಾದಶಿ ದಿನ ನೀವು ಶ್ರೀ ಕೃಷ್ಣನಿಗೆ ಕಮಲದ ಹೂವನ್ನು ಅರ್ಪಿಸಬೇಕು. ಒಂದು ವರ್ಷದಲ್ಲಿ 24  ಏಕಾದಶಿ ಬರುತ್ತದೆ. ವರ್ಷದ ಪ್ರತಿ ಏಕಾದಶಿಯಂದು ಕೃಷ್ಣನಿಗೆ 2 ಕಮಲದ ಹೂವುಗಳನ್ನು ಅರ್ಪಿಸಬೇಕು. ಹೀಗೆ ಮಾಡಿದ್ರೆ ಬೇಗ ಸಂತಾನ ಪ್ರಾಪ್ತಿಯಾಗುತ್ತದೆ.

ಕೌಟುಂಬಿಕ ಗಲಾಟೆ ಬಗೆಹರಿಸುತ್ತೆ ಕಮಲ : ಬುಧವಾರ, ಕಮಲದ ಹೂವಿಗೆ ಶ್ರೀಗಂಧವನ್ನು ಹಚ್ಚಬೇಕು. ನಂತ್ರ ಅದನ್ನು ತಾಯಿ ಲಕ್ಷ್ಮಿ ಮತ್ತು ಶ್ರೀ ಗಣೇಶನ ಪಾದಗಳಿಗೆ ಅರ್ಪಿಸಬೇಕು. ಹನ್ನೊಂದು ಬುಧವಾರಗಳ ಕಾಲ ಹೀಗೆ ಮಾಡಿದ್ರೆ  ಕೌಟುಂಬಿಕ ಕಲಹ ದೂರವಾಗಿ ಮನೆಯ ಸದಸ್ಯರಲ್ಲಿ ಪರಸ್ಪರ ಪ್ರೀತಿ ಹೆಚ್ಚುತ್ತದೆ.ಇದಲ್ಲದೆ ನೀವು ಪ್ರತಿ ದಿನ ತಾಯಿ ಲಕ್ಷ್ಮಿ ಪೂಜೆ ಮಾಡುವ ಸ್ಥಳದಲ್ಲಿ ಒಂದು ಕಮಲದ ಹೂವನ್ನು ಇಡಬೇಕು. ಹೀಗೆ ಮಾಡಿದ್ರೆ ಸಂಪತ್ತಿನ ವೃದ್ಧಿ ಜೊತೆ ಕುಟುಂಬಸ್ಥರ ಸಂಬಂಧ ಗಟ್ಟಿಯಾಗುತ್ತದೆ. 

ಆಸೆ ಈಡೇರಿಸಲು ನೆರವಾಗುತ್ತೆ ಕಮಲ : ಕಮಲದ ಹೂವನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಒಂದು ವಾರದವರೆಗೆ ಶಿವಲಿಂಗದ ಮೇಲೆ ಕಮಲದ ಹೂವನ್ನು ಅರ್ಪಿಸಬೇಕು. ಹೀಗೆ ಮಾಡಿದ್ರೆ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.

ಬಿಳಿ ಕಮಲದಲ್ಲಿದೆ ಶಕ್ತಿ : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶುಕ್ರವಾರ  ತೆಂಗಿನಕಾಯಿ ಜೊತೆಗೆ ಬಿಳಿ ಕಮಲವನ್ನು ಪೂಜಿಸಬೇಕು. ತಾಯಿ ಲಕ್ಷ್ಮಿ ಫೋಟದ ಕೆಳಗೆ ತೆಂಗಿನ ಕಾಯಿ ಮೇಲೆ ಬಿಳಿ ಕಮಲವನ್ನು ಇಟ್ಟು ಪೂಜೆ ಮಾಡಬೇಕು. ಸತತ 11 ಶುಕ್ರವಾರಗಳ ಕಾಲ ಪೂಜೆ ಮಾಡಬೇಕು. 11ನೇ ಶುಕ್ರವಾರ, ಕಮಲದ ಹೂವನ್ನು ಕೊಳ ಅಥವಾ ನದಿಯಲ್ಲಿ ಹಾಕಬೇಕು. ತೆಂಗಿನಕಾಯಿಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಕಪಾಟಿನಲ್ಲಿ ಇಡಬೇಕು. ಹೀಗೆ ಮಾಡಿದ್ರೆ ಸಂಪತ್ತು ದುಪ್ಪಟ್ಟಾಗುತ್ತದೆ.

ನಕಾರಾತ್ಮಕ ಶಕ್ತಿ ದೂರ : ಕಮಲದ ಹೂವಿನಲ್ಲಿ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವ ಗುಣವಿದೆ. ತಾಯಿ ಲಕ್ಷ್ಮಿಗೆ ಕಮಲದ ಹೂ ಅರ್ಪಿಸುವುದ್ರಿಂದ ಮನೆಯನ್ನು ಯಾವುದೇ ದುಷ್ಟಶಕ್ತಿ ಪ್ರವೇಶ ಮಾಡುವುದಿಲ್ಲ.

ಕಷ್ಟಗಳನ್ನು ದೂರ ಮಾಡಿ ಜೀವನದಲ್ಲೂ ಮಾಧುರ್ಯ ತುಂಬೋ ಸಕ್ಕರೆ

ಕೆಲಸದಲ್ಲಿ ಯಶಸ್ಸು ನೀಡಲು ಕಮಲದ ಹೂ : ಕಮಲದ ಹೂವಿನಲ್ಲಿ ಅಪಾರ ಶಕ್ತಿಯಿದೆ. ವೃತ್ತಿ ಜೀವನದಲ್ಲಿ ಯಶಸ್ವಿಯಾಗಬೇಕು ಎಂದಾದ್ರೆ ಕಮಲದ ಹೂವನ್ನು ತಾಯಿ ಲಕ್ಷ್ಮಿ ಜೊತೆ ಪೂಜೆ ಮಾಡಬೇಕು. ನಂತ್ರ ಈ ಹೂವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಕಪಾಟಿನಲ್ಲಿ ಇಡಬೇಕು. 

ದೀಪಾವಳಿಯಲ್ಲಿ ಮಾಡಿ ಈ ಕೆಲಸ : ದಿನ ಕಮಲದ ಹೂ ಅರ್ಪಿಸಲು ಸಾಧ್ಯವಿಲ್ಲ ಎನ್ನುವುದಾದ್ರೆ ಕಮಲದ ಹೂವಿನ ಮೇಲೆ ಕುಳಿತಿರುವ ತಾಯಿ ಫೋಟೋಕ್ಕೆ ಪೂಜೆ ಮಾಡಿ.  

Follow Us:
Download App:
  • android
  • ios