
ಮಿಸ್ಸಿಂಗ್ ಆಗಿದ್ದ ನಿವೃತ್ತ ರೈಲ್ವೆ ನೌಕರನ ದುರಂತ ಅಂತ್ಯ! ಹಂತಕರ ಸುಳಿವು ಕೊಟ್ಟಿದ್ದು ಯಲ್ಲೋ ಟೀ-ಶರ್ಟ್!
ಇದೇ ನಿಗೂಢ ಸಾವಿನ ತನಿಖೆಗಿಳಿದ ಪೊಲೀಸರಿಗೆ ಒಂದೇ ಒಂದು ಸುಲಿವು ಸಿಕ್ಕಿರಲಿಲ್ಲ. ಆದ್ರೆ ಹಂತಕನೊಬ್ಬ ಧರಿಸಿದ್ದ ಟೀ ಶರ್ಟ್ ನಿವೃತ್ತ ನೌಕರನ ಕೊಲೆ ರಹಸ್ಯ ಬಯಲು ಮಾಡಿತ್ತು. ಅಷ್ಟಕ್ಕೂ ಅವನ ಕೊಲೆ ನಡೆದಿದ್ದು ಹೇಗೆ? ಯಾಕೆ? ಒಬ್ಬ ಅಮಾಯಕನ ಬರ್ಬರ ಕೊಲೆಯ ಹಿಂದಿನ ರಹಸ್ಯವೇ ಇವತ್ತಿನ ಎಫ್.ಐ.ಆರ್
ಆತ ರೈಲ್ವೇ ಇಲಾಖೆಯ ನಿವೃತ್ತ ನೌಕರ. ಇಬ್ಬರು ಹೆಂಡತಿಯರು. ಮಕ್ಕಳು ಮೊಮ್ಮಕ್ಕಳು ಎಲ್ಲರೂ ಇದ್ದಾರೆ. ಆದ್ರೆ ಆತ ಮಾತ್ರ ಎಲ್ಲರಿಂದ ದೂರವಾಗಿ ಒಂಟಿ ಜೀವನ ನಡೆಸುತ್ತಿದ್ದ. ತನ್ನ ಪೆನ್ಶನ್ ಮತ್ತು ನಿವೃತ್ತಿ ನಂತರ ಸಿಕ್ಕ ಸೆಟಲ್ಮೆಂಟ್ ಅಮೌಂಟ್ನಲ್ಲಿ ಜೀವನ ಸಾಗಿಸುತ್ತಿದ್ದ. ಆದ್ರೆ ಆವತ್ತು ಇದ್ದಕ್ಕಿದ್ದಂತೆ ನಾಪತ್ತೆ ಎಲ್ಲಿ ಹೋದ. ಏನಾದ ಒಂದೂ ಗೊತ್ತಾಗೋದಿಲ್ಲ. ಆದ್ರೆ ಆತ ಕಾಣೆಯಾಗಿ ಸರಿಯಾಗಿ ಒಂದು ತಿಂಗಳ ನಂತರ ಅವನ ಡೆಡ್ಬಾಡಿ ಸಿಕ್ಕಿತ್ತು.
Add Asianetnews Kannada as a Preferred Source
