ಘೋಡಾ ಆ್ಯಂಡ್ ಗೋಳಿ ಬೆನ್ನತ್ತಿದ ಸುವರ್ಣನ್ಯೂಸ್‌ಗೆ ಭೇಷ್ ಎಂದ ಪೊಲೀಸರು!

ವಿಜಯಪುರದ ಗನ್ ಮಾಫಿಯಾ ಕುರಿತು ಸುವರ್ಣನ್ಯೂಸ್ ನೀಡಿದ ಖಚಿತ ಮಾಹಿತಿ ಮೇರೆಗೆ ವಿಜಯಪುರ ಜಿಲ್ಲಾ ಪೊಲೀಸರು ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಎಸ್‌ಪಿ ಪ್ರಕಾಶ್ ನಿಕ್ಕಂ ಸುವರ್ಣನ್ಯೂಸ್ ಧೈರ್ಯ ಮತ್ತು ಸಾಮಾಜಿಕ ಕಳಕಳಿಗೆ ಧನ್ಯವಾದ ಅರ್ಪಿಸಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು(ಸೆ.27): ವಿಜಯಪುರದ ಗನ್ ಮಾಫಿಯಾ ಕುರಿತು ಸುವರ್ಣನ್ಯೂಸ್ ನೀಡಿದ ಖಚಿತ ಮಾಹಿತಿ ಮೇರೆಗೆ ವಿಜಯಪುರ ಜಿಲ್ಲಾ ಪೊಲೀಸರು ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಎಸ್‌ಪಿ ಪ್ರಕಾಶ್ ನಿಕ್ಕಂ ಸುವರ್ಣನ್ಯೂಸ್ ಧೈರ್ಯ ಮತ್ತು ಸಾಮಾಜಿಕ ಕಳಕಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಸುವರ್ಣನ್ಯೂಸ್ ಖಚಿತ ಮಾಹಿತಿ ಬೆನ್ನತ್ತಿದ್ದ ಪೊಲೀಸರು ಸಿಂಧಗಿ ತಾಲೂಕಿನ ಆಲಮೇಲ್'ನ ಗನ್ ಡೀಲರ್ ಹುಸೇನ್ ಹಾಗೂ ಅರ್ಶದ್ ಬಿಲ್ವಾಲ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ತಯಾರಾಗುವ ಕಂಟ್ರಿ ಪಿಸ್ತೂಲಿನಿಂದಲೇ ಚಿಂತಕ ಎಂಎಂ ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲಾಗಿತ್ತು ಎಂದು ಹೇಳಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Related Video