‘ನಾ ಅತೃಪ್ತನಲ್ಲ, ನನಗೆ ಕಾಂಗ್ರೆಸ್ಸೇ ಎಲ್ಲಾ, ಬಿಜೆಪಿ ಸೇರೋ ಪ್ರಶ್ನೆಯೇ ಇಲ್ಲ!’ ಗಣಿನಾಡಿನ ಶಾಸಕ ಸ್ಪಷ್ಟನೆ

ನಾನು ಅತೃಪ್ತನಲ್ಲ, ಈಗಲೂ ಕಾಂಗ್ರೆಸ್‌ನಲ್ಲೇ ಇದ್ದೇನೆ. ಬಿಜೆಪಿ ಸೇರೋ ಪ್ರಶ್ನೆ ಇಲ್ಲ ಎಂದು ಸುವರ್ಣನ್ಯೂಸ್ ಜೊತೆ ಮಾತನಾಡಿದ ಗಣಿನಾಡಿನ ಶಾಸಕರೊಬ್ಬರು ಹೇಳಿದ್ದಾರೆ.  

Share this Video
  • FB
  • Linkdin
  • Whatsapp

ಬೆಂಗಳೂರು (ಜು.01): ನಾನು ಅತೃಪ್ತನಲ್ಲ, ಇದನ್ನು ಹಲವಾರು ಬಾರಿ ಸ್ಪಷ್ಟಪಡಿಸಿದ್ದೇನೆ. ನಾನು ಈಗಲೂ ಕಾಂಗ್ರೆಸ್‌ನಲ್ಲೇ ಇದ್ದೇನೆ. ಬಿಜೆಪಿ ಸೇರೋ ಪ್ರಶ್ನೆ ಇಲ್ಲ ಎಂದು ಬಳ್ಳಾರಿಯ ಹಗರಿ ಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಹೇಳಿದರು.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುವರ್ಣನ್ಯೂಸ್ ಜೊತೆ ಮಾತನಾಡಿದ ಭೀಮಾ ನಾಯ್ಕ್, ಆನಂದ್ ಸಿಂಗ್ ಜೊತೆ ಫೋನಲ್ಲೋ, ಅಥವಾ ಭೇಟಿಯಾಗಿಯೋ ಮಾತನಾಡುವೆ, ರಾಜೀನಾಮೆ ಹಿಂಪಡೆಯಲು ಮನವಿ ಮಾಡುವೆ ಎಂದು ಅವರು ಹೇಳಿದರು.

 ಬಿಜೆಪಿ ಕಳೆದೊಂದು ವರ್ಷದಿಂದ ಸರ್ಕಾರ ರಚಿಸುವ ಕನಸು ಕಾಣುತ್ತಿದೆ. ಅದು ನನಸಾಗಲ್ಲ. ಮೈತ್ರಿ ಸರ್ಕಾರ 5 ವರ್ಷ ಮುಂದುವರಿಯಲಿದೆ ಎಂದು ಭೀಮಾ ನಾಯ್ಕ್ ಹೇಳಿದರು. ವಿಜಯನಗರ ಶಾಸಕ ಆನಂದ್ ಸಿಂಗ್ ಹಾಗೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಹುಟ್ಟುಹಾಕಿದೆ.

Related Video