Asianet Suvarna News

ಚಾಮರಾಜನಗರ ಬಿಆರ್‌ಟಿ ಹುಲಿ ರಕ್ಷಿತಾರಣ್ಯದಲ್ಲಿ ಬೆಂಕಿ

Apr 14, 2019, 10:10 PM IST

ಫೆಬ್ರವರಿಯಲ್ಲಿ ರಾಜ್ಯವನ್ನೇ ಆತಂಕಕ್ಕೆ ದೂಡಿದ್ದ ಕಾಡ್ಗಿಚ್ಚು ಮತ್ತೆ ಕಾಣಿಸಿಕೊಂಡಿದೆ.  ಚಾಮರಾಜನಗರ ಜಿಲ್ಲೆಯ ಬಿ.ಆರ್.ಟಿ.ಹುಲಿಕ್ಷಿತಾರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೂರಾರು ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಬೈಲೂರು ವಲಯದ ಕೌಳೆಹಳ್ಳ ಬೆಟ್ಟ  ಮತ್ತು ಕೊಳ್ಳೇಗಾಲ ವಲಯದ ಆಂಡಿಪಾಳ್ಯದಲ್ಲಿ ಬೆಂಕಿ ಆವರಿಸಿದೆ. ಬೆಂಕಿ ನಂದಿಸಲು ಅರಣ್ಯ ಇಲಾಖೆ ನಿರ್ಲಕ್ಷ್ಯ ತಾಳಿದೆ ಎಂದು  ಸ್ಥಳೀಯರು ಆರೋಪಿಸಿದ್ದಾರೆ.