ಸೋಮಣ್ಣನವರೇ ಯಡಿಯೂರಪ್ಪ- ವಿಜಯೇಂದ್ರ ನಿಮ್ ಪರ ತುಮಕೂರಿಗೆ ಪ್ರಚಾರಕ್ಕೆ ಬರ್ತಾರಾ?

ತುಮಕೂರು ಲೋಕಸಭಾ ಕ್ಷೇತ್ರಕ್ಕೆ ನಿಮ್ಮ ಪರವಾಗಿ ಪ್ರಚಾರ ಮಾಡಲು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಬರುತ್ತಾರಾ.? ಲೋಕಸಭಾ ಚುನಾವಣೆ ಬಂದಾಗ ದೆಹಲಿ ನಾಯಕರು ದಿಢೀರನೆ ನನ್ನ ಮನೆಗೆ ಬಂದರು...

First Published Mar 24, 2024, 4:41 PM IST | Last Updated Mar 24, 2024, 4:41 PM IST

ನಾನು ಹೊಟ್ಟೆಪಾಡಿಗೋಸ್ಕರ ಬೆಂಗ್ಳೂರಿಗೆ ಬಂದವನು! ಕಸ್ತೂರಿ ಮಾತ್ರೆ ಮಾರಿಕೊಂಡು, ಸಂಜೆ ಕಾಲೇಜಿನಲ್ಲಿ ಓದಿ, ಎಲ್‌ಐಸಿ ಪಾಲಿಸಿ ಮಾರಿ ಜೀವ ಮಾಡಿದವ್ನು ನಾನು! ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಎರಡು ಕಡೆ ಸ್ಪರ್ಧೆ ಮಾಡಿದೆ. ಆದರೆ, ನನ್ನ ಸ್ಪರ್ಧೆಯ ನಂತರ ಕೆಲವರು ಮಾಡಿದ ಒಳಸಂಚಿಗೆ ಬಲಿಯಾಗಿ ನಾನು ಸೋತೆನು. ಇದರಿಂದ ಕೆಲವು ದಿನಗಳ ಕಾಲ ನನಗೆ ಮಾನಸಿಕವಾಗಿ ನೋವು ಉಂಟಾಗಿತ್ತು. ಚಿಕ್ಕ ವಯಸ್ಸಿನಿಂದಲೂ ಕೆಲಸ ಮಾಡಿಕೊಂಡು ಬಂದವನಿಗೆ ಈಗ ಜನರ ಸೇವೆ ಹಾಗೂ ಕೆಲಸ ಮಾಡಿಕೊಂಡು ಇರುವ ಅವಕಾಶ ತಪ್ಪಿ ಹೋಯಿತಲ್ಲಾ ಎಂಬ ನೋವು ಕಾಡಲಾರಂಭಿಸಿತು. ಇನ್ನು ಲೋಕಸಭಾ ಚುನಾವಣೆ ಬಂದಾಗ ದೆಹಲಿ ನಾಯಕರು ದಿಢೀರನೆ ನನ್ನ ಮನೆಗೆ ಬಂದರು. ನಂತರ, ಎಲ್ಲ ವಿಚಾರವನ್ನು ಮಾತನಾಡಿದ ಅವರಿಗೆ ನಮ್ಮ ಮನೆಯಲ್ಲಿ ಯಾವುದೇ ವಿಶೇಷ ಊಟವನ್ನೂ ಮಾಡಿಸಿರಲಿಲ್ಲ. ಆಗ ನಮ್ಮನೆಯ ಸರಳತೆಯನ್ನು ನೋಡಿ, ಎಲ್ಲ ಸ್ಥಳೀಯ ನಾಯಕರನ್ನು ಹೊರಗೆ ಕಳುಹಿಸಿ ನಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡಿದರು. ಇಲ್ಲಿ ನಡೆದ ವಿಚಾರವನ್ನು ದೆಹಲಿಗೆ ಹೋಗಿ ಹೇಳಿದರು. ಅವರು ತುಮಕೂರಿನ ಟಿಕೆಟ್ ಕೊಟ್ಟು ಸಂಸತ್ತಿಗೆ ಬರುವಂತೆ ಸೂಚನೆ ನೀಡಿದ್ದಾರೆ ಎಂದು ವಿ. ಸೋಮಣ್ಣ ಹೇಳಿದರು.