Asianet Suvarna News Asianet Suvarna News

ಗುಜರಾತ್‌ನಲ್ಲಿ ಪ್ರಧಾನಿ ಮೋದಿ ರೋಡ್‌ಶೋ: ಭುಜ್‌ ಜನರಿಂದ ‘ನಮೋ’ಗೆ ಸ್ವಾಗತ

ಗುಜರಾತ್‌ನ ಭುಜ್‌ನಲ್ಲಿ ಪ್ರಧಾನಿ ಮೋದಿ ರೋಡ್‌ ಶೋ ನಡೆಸಿದ್ದಾರೆ. ಈ ವೇಳೆ ರಸ್ತೆಯ ಎರಡೂ ಬದಿಗಳಲ್ಲಿ ಪ್ರಧಾನಿಯನ್ನು ನೋಡಲು ಜನರು ನಿಂತು ತಮ್ಮ ಪ್ರಧಾನಿಯನ್ನು ಸ್ವಾಗತ ಕೋರಿದ್ದಾರೆ. 

First Published Aug 28, 2022, 12:39 PM IST | Last Updated Aug 28, 2022, 12:39 PM IST

ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಾಗೂ ತಮ್ಮ ತವರು ಗುಜರಾತ್‌ ರಾಜ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ಎರಡನೇ ದಿನವಾದ ಇಂದು  ಭಾನುವಾರ ಕಚ್ ಜಿಲ್ಲೆಯ ಭುಜ್ ಪಟ್ಟಣದಲ್ಲಿ ರೋಡ್ ಶೋ ನಡೆಸಿದರು.ಭುಜ್ ಪಟ್ಟಣದ ಹಿಲ್ ಗಾರ್ಡನ್ ವೃತ್ತ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ನಡುವೆ ನಡೆದ 3 ಕಿ.ಮೀ. ಉದ್ದದ ರೋಡ್‌ಶೋನಲ್ಲಿ ಮೋದಿಯವರನ್ನು ಸ್ವಾಗತಿಸಲು ಭುಜ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಜನರು ರಸ್ತೆಯ ಎರಡೂ ಬದಿಗಳಲ್ಲಿ ಜಮಾಯಿಸಿದ್ದರು. 

ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನಸಮೂಹವು "ಮೋದಿ ಮೋದಿ" ಎಂದು ಕೂಗುತ್ತಲೇ ಇದ್ದರು ಮತ್ತು ತ್ರಿವರ್ಣ ಧ್ವಜವನ್ನು ಬೀಸುತ್ತಾ ಪ್ರಧಾನಿಯವರ ಮೇಲಿನ ಪ್ರೀತಿಯನ್ನು ಅಲ್ಲಿನ ಜನತೆ ವ್ಯಕ್ತಪಡಿಸಿತು. ಮೋದಿ ಅವರು ತಮ್ಮ ಕಾರಿನಲ್ಲಿ ನಿಂತು ಜನರತ್ತ ಕೈ ಬೀಸುವ ಮೂಲಕ ಪ್ರತ್ಯುತ್ತರ ನೀಡಿದರು. ಒಂದು ಹಂತದಲ್ಲಿ ಮೋದಿಯವರು ಕಾರಿನಿಂದ ಇಳಿದು ಕೆಲ ಕಾಲ ನಡೆದಿದ್ದಾರೆ. ಇನ್ನು, ಸ್ಥಳೀಯ ಆಡಳಿತವು ಪ್ರಧಾನಿ ಸ್ವಾಗತಕ್ಕೆ ಸಾಂಸ್ಕೃತಿಕ ಮತ್ತು ಜಾನಪದ ಪ್ರದರ್ಶನಗಳನ್ನು ನಡೆಸುಲು ಮಾರ್ಗದುದ್ದಕ್ಕೂ ವೇದಿಕೆಗಳನ್ನು ನಿರ್ಮಿಸಿದೆ.

Video Top Stories