ಕೌಂಪೌಂಡ್‌ ಒಳಗಿಂದಲೇ ಬೈಕ್ ಕದ್ದೊಯ್ದ ಪೊಲೀಸರು..!

ರಕ್ಷಕರಾಗಬೇಕಿದ್ದ ಆರಕ್ಷಕರೇ ಕಳ್ಳರರಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮನೆ ಕಾಂಪೌಂಡ್‌ನೊಳಗೆ ನಿಲ್ಲಿಸಿದ್ದ ಬೈಕ್‌ನ್ನು ಪೊಲೀಸರು ಹೊತ್ತೊಯ್ದಿದ್ದಾರೆ. ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯ ರಾತ್ರಿ ಪಾಳಿ ಪೊಲೀಸರಿಂದ ಕೃತ್ಯ ನಡೆದಿದ್ದು, ಶುಕ್ರವಾರ ಮುಂಜಾನೆ 2.30 ರ ಸುಮಾರಿಗೆ ಕಳ್ಳತನ ನಡೆದಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ನ.23): ರಕ್ಷಕರಾಗಬೇಕಿದ್ದ ಆರಕ್ಷಕರೇ ಕಳ್ಳರರಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮನೆ ಕಾಂಪೌಂಡ್‌ನೊಳಗೆ ನಿಲ್ಲಿಸಿದ್ದ ಬೈಕ್‌ನ್ನು ಪೊಲೀಸರು ಹೊತ್ತೊಯ್ದಿದ್ದಾರೆ. ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯ ರಾತ್ರಿ ಪಾಳಿ ಪೊಲೀಸರಿಂದ ಕೃತ್ಯ ನಡೆದಿದ್ದು, ಶುಕ್ರವಾರ ಮುಂಜಾನೆ 2.30 ರ ಸುಮಾರಿಗೆ ಕಳ್ಳತನ ನಡೆದಿದೆ. ರಾಂಗ್ ಪಾರ್ಕಿಂಗ್‌ನಲ್ಲಿ ನಿಲ್ಲಿಸಿರುವ ಬೈಕ್‌ನ್ನು ಟೋಯಿಂಗ್ ಮಾಡಿಕೊಂಡು ಹೋಗಲಾಗುತ್ತೆ. ಆದರೆ ಇಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕನ್ನೇ ಹೊತ್ತೊಯ್ಯಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪತ್ನಿ ಸಾವಿನ ಸುದ್ದಿ ಕೇಳಿ ಇಹಲೋಕ ತ್ಯಜಿಸಿದ ಪತಿ: ಸಾವಿನಲ್ಲೂ ಒಂದಾದ ದಂಪತಿ

ಪೊಲೀಸರನ್ನು ಕೇಳಿದರೆ ಸಬೂಬು ಉತ್ತರ ನೀಡಿ ಜಾರಿಕೊಳ್ಳುತ್ತಿದ್ದು, ಪೊಲೀಸರ ಕಳ್ಳ ತಳ್ಳಾಟ ಸಿಸಿಟಿವಿಲಿಯಲ್ಲಿ ಸೆರೆಯಾಗಿದೆ. ಬೇಲಿಯೇ ಎದ್ದು ಒಲ‌ ಮೇಯ್ದ ಕಥೆಯಂತಾಗಿದ್ದು, ಸುಬ್ರಹ್ಮಣ್ಯ ನಗರ ಪೊಲೀಸರು ಬೈಕ್ ಮಾಲೀಕನಿಂದ 300 ರೂಪಾಯಿ ಲಂಚ ಪಡೆದಿದ್ದಾರೆ. ಹಣ ಪಡೆದು ಬಿಲ್ ನೀಡದೆ ಬೈಕ್ ಕೊಟ್ಟು ಕಳುಹಿಸಿಕೊಟ್ಟಿದ್ದಾರೆ.

Related Video