ಸಿಎಂ ಸಿದ್ದರಾಮಯ್ಯ ಅವರನ್ನು ಕಳಂಕ ಮುಕ್ತ ಮಾಡುತ್ತಾ ಪಾರ್ವತಿ ಮಂತ್ರ!

ಮುಡಾ ವಿವಾದದ ನಡುವೆ, ಪಾರ್ವತಿ ಸಿದ್ದರಾಮಯ್ಯ ಅವರು ಮುಡಾ ನಿವೇಶನವನ್ನು ವಾಪಸ್ ನೀಡಿದ್ದಾರೆ. ಈ ನಿರ್ಧಾರವು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದು, ಸಿದ್ದರಾಮಯ್ಯ ಅವರ ಮೇಲಿನ ಆರೋಪಗಳನ್ನು ತೊಳೆಯುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಅ.02): ನನ್ನ ಪತಿಯ ಗೌರವ ಹಾಗೂ ಘನತೆಯ ಮುಂದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಪಡೆದ ಸೈಟುಗಳು ತೃಣಕ್ಕೆ ಸಮಾನವಾಗಿವೆ ಎಂದು ಪಾರ್ವತಿ ಸಿದ್ದರಾಮಯ್ಯ ಅವರು ಮುಡಾ ಕೊಟ್ಟ ನಿವೇಶನವನ್ನು ವಾಪಸ್ ಕೊಟ್ಟಿದ್ದಾರೆ. ಆದರೆ, ಗಂಡನನ್ನು ಉಳಿಸಲು ದಿಟ್ಟ ತವರು ಮನೆಯಿಂದ ಕುಂಕುಮಕ್ಕೆ ಬಂದ ಜಮೀನು ಕೊಟ್ಟು ಗಂಡನನ್ನು ಉಳಿಸಿಕೊಂಡಿದ್ದಾರೆ.

ಆರಂಭದಲ್ಲಿ ಮೊಳಕೆಯಷ್ಟಿದ್ದ ಹಗರಣವೊಂದು, ಈಗ ರಣಹದ್ದಿನ ರೂಪ ತಾಳಿದೆ. ಅದು ರಾಜ್ಯದ ಮುಖ್ಯಮಂತ್ರಿಗಳ ಕುರ್ಚಿಯನ್ನೇ ಕುಕ್ಕೋಕೆ ಶುರುಮಾಡಿದೆ. ಸಾಟಿ ಇಲ್ಲದ ಜನನಾಯಕ ಅನ್ನಿಸಿಕೊಂಡಿದ್ದ ಸಿದ್ದರಾಮಯ್ಯನೋರ ಪಾಲಿಗೆ, ಆ 14 ಸೈಟುಗಳು ಶಾಪದ ಹಾಗೆ ಕಾಡ್ತಾ ಇದೆ. ಇಂಥಾ ಮುಖ್ಯಮಂತ್ರಿಗಳನ್ನ ಶಾಪ ಮುಕ್ತರಾಗಿಸೋಕೆ ಮುಂದಾಗಿರೋದು, ಸಿದ್ದರಾಮಯ್ಯ ಅವರ ಧರ್ಮ ಪತ್ನಿ. ತನ್ನ ಪತಿ ಕಷ್ಟದಲ್ಲಿರುವಾಗ ಪತ್ನಿ ತೆಗೆದುಕೊಂಡಿರೋ ಅದೊಂದು ಮಹತ್ವದ ನಿರ್ಧಾರ, ರಾಜ್ಯ ರಾಜಕಾರಣದಲ್ಲಿ ಅತಿದೊಡ್ಡ ಟರ್ನಿಂಗ್ ಪಾಯಿಂಟ್ ಆಗೋ ಸಾಧ್ಯತೆ ಎದ್ದು ಕಾಣ್ತಾ ಇದೆ.

ಅಷ್ಟಕ್ಕೂ ಪಾರ್ವತಿಯರ ಪತ್ರದ ಮಂತ್ರಕ್ಕಿದ್ಯಾ ಸಿದ್ದರಾಮಯ್ಯ ಸುತ್ತಲೂ ಇರುವ ಚಕ್ರವ್ಯೂಹವನ್ನ ಛಿದ್ರಗೊಳಿಸುವ ಶಕ್ತಿ..? ಕುಂಕುಮ ಭಾಗ್ಯಕ್ಕೆ ಬಂದಿರುವ ಭೂಮಿ, ಸಿದ್ದರಾಮಯ್ಯ ಮೇಲಿರೋ ಕಳಂಕ ತೊಳೆಯುತ್ತಾ..? ಪಾರ್ವತಿಯವರ ನಿರ್ಧಾರ ಸಿದ್ದರಾಮಯ್ಯ ಅವರನ್ನ ರಕ್ಷಿಸುತ್ತಾ..? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಹುಡುಕುವ ಪ್ರಯತ್ನವೇ ಇವತ್ತಿನ ಸುವರ್ಣ ಸ್ಪೆಷಲ್ ಪಾರ್ವತಿ ಮಂತ್ರ.

ನಟ ದರ್ಶನ್‌ನನ್ನು ಜೈಲಿಗೆ ಕಳುಹಿಸಿದ ಮೂವರು ಅಭಿಮಾನಿಗಳು ಜೈಲಿನಿಂದ ಬಿಡುಗಡೆ!

ಸಿಎಂ ಪತ್ನಿಯ ಸೈಟ್ ವಾಪಸ್ ನಿರ್ಧಾರ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ಕೋಲಾಹಲಕ್ಕೆ ಕಾರಣವಾಗಿದೆ. ಇದನ್ನ ಬಿಜೆಪಿಯವರೇ ಒಂದು ರೀತಿ ವ್ಯಾಖ್ಯಾನಿಸ್ತಾಯಿದ್ರೆ, ಕಾಂಗ್ರೆಸ್ನವರು ಇನ್ನೊಂದು ರೀತಿ ವ್ಯಾಖ್ಯಾನಿಸ್ತಿದ್ದಾರೆ. ಈ ಬಗ್ಗೆ ಡೀಟೈಲ್ ಆಗಿ ತೋರಿಸ್ತೀವಿ. ಮುಡಾ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.. ಸಿದ್ದರಾಮಯ್ಯ ಪತ್ನಿ ಪಾರ್ವತಿಯವರ ನಿರ್ಧಾರದಿಂದ ಯಾರೂ ಊಹಿಸದಿದ್ದ ತಿರುವು ಎದುರಾಗಿದೆ.. ಆಗ ಪಡೆದಿದ್ದ 14 ಸೈಟ್ ವಾಪಸ್ ಕೊಟ್ಟಿದ್ದು ರಾಜ್ಯ ರಾಜಕೀಯದಲ್ಲಿ ಹೊಸ ಜಟಾಪಟಿಗೆ ಕಾರಣವಾಗಿದೆ. ಸಿಎಂ ಪತ್ನಿಯ ತೀರ್ಮಾನವನ್ನ ಕೈ ನಾಯಕರು ಸಮರ್ಥಿಸಿಕೊಳ್ತಿದ್ರೆ, ವಿಪಕ್ಷಗಳ ನಾಯಕರು ಇದನ್ನೇ ಮುಂದಿಟ್ಟುಕೊಂಡು ಸಿದ್ದರಾಮಯ್ಯ ವಿರುದ್ಧ ವಾಕ್ಸಮರ ಆರಂಭಿಸಿದ್ದಾರೆ. ಪಾರ್ವತಿಯವರ ನಿರ್ಧಾರ ಮತ್ತೊಂದು ಸುತ್ತಿನ ರಾಜಕೀಯ ಕದನಕ್ಕೆ ಕಾರಣವಾಗಿದೆ. 

ಇಷ್ಟೆಲ್ಲಾ ರಾಜಕೀಯ ಜಟಾಪಟಿ ಮಧ್ಯೆ ಸಿಎಂ ಪತ್ನಿ ವಾಪಸ್ ಕೊಟ್ಟಿದ್ದ ಎಲ್ಲಾ ಸೈಟ್ಗಳನ್ನ ರದ್ಧುಗಳಿಸಲಾಗಿದೆ. ಇನ್ನು ಸಂಕಷ್ಟ ಸುಳಿಯಲ್ಲಿ ಸಿಲುಕಿಕೊಂಡಿರುವ ಸಿದ್ದರಾಮಯ್ಯ ಅವರ ಕುರಿತಾಗಿ ಅವರ ಸಹೋದರ ಮಾತನಾಡಿದ್ದಾರೆ. ಸಿದ್ದರಾಮಯ್ಯ ಪತ್ನಿ, ಪಾರ್ವತಿ ಅವ್ರು, ಮುಡಾಗೆ ಒಂದು ಪತ್ರ ಬರೀತಾರೆ.. ಆ ಪತ್ರದಲ್ಲಿ ನೋವಿತ್ತು… ಆದ್ರೆ, ಅದರ ಜೊತೆಗೆ ಒಂದು ಮಾಸ್ಟರ್ ಪ್ಲ್ಯಾನ್ ಕೂಡ ಇತ್ತಾ..? ಇಂಥಹದೊಂದು ಪ್ರಶ್ನೆ ಸಿದ್ದರಾಮಯ್ಯ ಅವರ ಪತ್ನಿ ಸೈಟ್ ವಾಪಸ್ ಕೊಟ್ಟ ಬೆನ್ನಲ್ಲೆ ಎದ್ದು ಕೂತಿದೆ.

Related Video