ಮುನಿರತ್ನ ಸುತ್ತ ಚಕ್ರವ್ಯೂಹ: ಜಡ್ಜ್ ಮುಂದೆ ಕಣ್ಣೀರಿಡುತ್ತಾ ರಾಜೀನಾಮೆ ಸುಳಿವು ನೀಡಿದ ಶಾಸಕ
ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದು, ನ್ಯಾಯಾಲಯದಲ್ಲಿ ಕಣ್ಣೀರು ಹಾಕಿದ್ದಾರೆ. ರಾಜಕೀಯ ಷಡ್ಯಂತ್ರದ ಆರೋಪಗಳ ನಡುವೆ, ಮುನಿರತ್ನ ಅವರು ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಸುತ್ತ ದೊಡ್ಡ ಚಕ್ರವ್ಯೂಹವೇ ಎದ್ದು ನಿಂತಿದೆ. ಅತ್ಯಾಚಾರ ಪ್ರಕರಣದಲ್ಲಿ ಮುನಿರತ್ನ ವಿರುದ್ಧ 10 ಸೆಕ್ಷನ್‌ಗಳಡಿ ಕೇಸ್‌ಗಳು ದಾಖಲಾಗಿವೆ. ಮತ್ತೊಂದೆಡೆ ಚಕ್ರವ್ಯೂಹದಲ್ಲಿ ಸಿಲುಕಿರೋ ಮುನಿರತ್ನ ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟಿದ್ದಾರೆ. ಮುನಿರತ್ನ ಅವರನ್ನು ಪೊಲೀಸರು ಕೋರ್ಟ್‌ಗೆ ಹಾಜರು ಪಡಿಸಿದಾಗ ಅಲ್ಲಿ ಗಂಭೀರ ಘಟನೆಯೊಂದು ನಡೆದಿದ್ದು, ಜಡ್ಜ್ ಮುಂದೆಯೇ ಮುನಿರತ್ನ ರಾಜೀನಾಮೆಯ ಮಾತುಗಳನ್ನಾಡಿದ್ದಾರೆ.
ಶಾಸಕ ಮುನಿರತ್ನ ವಿರುದ್ಧ ರಾಜಕೀಯ ಷಡ್ಯಂತ್ರ ಹೆಣೆಯಲಾಗಿದೆ ಅಂತ ಬಿಜೆಪಿ ನಾಯಕರು ಆರೋಪಿಸ್ತಾ ಇದ್ದಾರೆ. ಇದು ಮುನಿರತ್ನ ವಿರುದ್ಧದ ಚಕ್ರವ್ಯೂಹ ಅನ್ನೋ ಮಾತುಗಳು ಕೇಳಿ ಬರ್ತಾ ಇವೆ. ಇದಕ್ಕೆ ಬಿಜೆಪಿ ನಾಯಕರು ಕೂಡ ಹೌದು ಅಂತಿದ್ದಾರೆ. ಆದರೆ, ಇದೆಲ್ಲಾ ಮುನಿರತ್ನ ಅವ್ರ ಸ್ವಯಂಕೃತ ಪ್ರಮಾದ, ಇದ್ರಲ್ಲಿ ರಾಜಕೀಯ ದ್ವೇಷದ ಪ್ರಶ್ನೆಯೇ ಇಲ್ಲ ಅಂತ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಮತ್ತೊಂದೆಡೆ ಮುನಿರತ್ನ ವಿರುದ್ಧದ ಚಕ್ರವ್ಯೂಹ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಶಾಸಕ ಮುನಿರತ್ನ ವಿರುದ್ಧ ಎದ್ದು ನಿಂತಿರೋ ಚಕ್ರವ್ಯೂಹದ ಹಿಂದೆ ರಾಜಕೀಯ ಷಡ್ಯಂತ್ರವಿದೆಯೋ, ಇಲ್ವೋ ಗೊತ್ತಿಲ್ಲ. ಆದರೆ, ಮುನಿರತ್ನ ಅವರಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟಗಳು ಎದುರಾಗ್ತಾ ಇರೋದಂತೂ ಸತ್ಯ.