ಇನ್‌ಸ್ಟಾಗ್ರಾಮ್ ಸುಂದರಿ ಬಲೆಗೆ ಬಿದ್ದ ರೌಡಿಶೀಟರ್ ಸೂರ್ಯ ಕಬಾಬ್ ತಿನ್ನುತ್ತಲೇ ಹೆಣವಾದ!

ಊರಿಗೂ ಮಾರಕನಾಗಿದ್ದ ರೌಡಿ ಸೂರ್ಯನ ಕೊಲೆಯ ತನಿಖೆ ನಡೆಸಿದ ಪೊಲೀಸರಿಗೆ ತಲೆಕೆಟ್ಟು ಹೋಗಿತ್ತು. ಕೊನೆಗೂ ಹಂತಕರ ಹೆಡೆಮುರಿ ಕಟ್ಟಿದ್ದಾರೆ. ಸೂರ್ಯನನ್ನ ಶರತ್ ಕೊಲೆ ಮಾಡಿಸಿದ್ದ ಅನ್ನೋದು ತನಿಖೆಯಿಂದ ತಿಳಿದುಬಂದಿದೆ.

Sathish Kumar KH  | Updated: Mar 24, 2025, 8:27 PM IST

ಅವನೊಬ್ಬ ರೌಡಿ.. ಮನೆಗೆ ಮಾರಿಯಾಗಿದ್ದವನು ಊರಿಗೂ ಮಾರಕನಾಗಿದ್ದ.. ತಾಳಿ ಕಟ್ಟಿದ ಹೆಂಡತಿ ನೋಡೋವರೆಗೂ ನೋಡಿ ಮಕ್ಕಳನ್ನ ಕರೆದುಕೊಂಡು ತವರು ಸೇರಿದ್ದಳು. ಹೆತ್ತವರು ಇವನ ಕಾಟ ಬೇಡವೇಬೇಡ ಅಂತ ದೂರವಾಗಿದ್ದರು. ಆದರೆ, ಊರಲ್ಲಿ ಮೆರೆದೋನಿಗೆ ದುಷ್ಮನ್‌ಗಳೇ ಗುಂಡಿ ತೋಡಿದ್ದು ಮಾತ್ರ ವಿಪರ್ಯಾಸ...

ಇವನು ವಾಸವಾಗಿದ್ದ ಏರಿಯಾದಲ್ಲಿ ಗೆಳೆಯರಿಗಿಂತ ವೈರಿಗಳೇ ಜಾಸ್ತಿ ಆಗಿದ್ದರು. ಆ ಗ್ರಾಮದವರಿಗೆ ಇವನನ್ನ ನೋಡಿದರೂ ನೋಡದೇ ಇರುವವರ ಹಾಗೇ ಇದ್ದರು. ಇಂತಹ ಒಬ್ಬ ವ್ಯಕ್ತಿ ಆವತ್ತು ಇದ್ದಕ್ಕಿದ್ದಂತೆ ತನ್ನದೇ ಮನೆಯಲ್ಲಿ ಮರ್ಡರ್​ ಆಗಿಬಿಟ್ಟಿದ್ದನು. ಎಣ್ಣೆ ಹಾಕೊಂಡು ಕಬಾಬ್​​ ತಿನ್ನುವಾಗಲೇ ಆತನಿಗೆ ಮಚ್ಚಿನೇಟು ಬಿದ್ದಿತ್ತು. ಈ ಮರ್ಡರ್​​ ಕೇಸ್​ ತನಿಖೆ ನಡೆಸಿದ ಪೊಲೀಸರಿಗೆ ತಲೆಕೆಟ್ಟು ಹೋಗಿತ್ತು. ಅವನಿಗೆ ಎಲ್ಲರೂ ವೈರಿಗಳೇ ಆದರೂ  ಕೊಂದುವರು ಯಾರು..? ಆದರೆ ಎಲ್ಲಾ ಆ್ಯಂಗಲ್‌ನಲ್ಲೂ ತನಿಖೆ ನಡೆಸಿದ ಪೊಲೀಸರು ಕೊನೆಗೂ ಹಂತಕರ ಹೆಡೆಮುರಿ ಕಟ್ಟಿದ್ದಾರೆ.

ಊರಿನಲ್ಲಿ ಉಂಡಾಡಿ ಗುಂಡನ್ನಾಗಿದ್ದ ಸೂರ್ಯನನ್ನ ಶ್ವೇತಾನೇ ಕೊಲೆ ಮಾಡಿಸಿದ್ದಾಳೆ ಅಂತ ಆಕೆಯ ಕುಟುಂಬ ಆರೋಪಿಸಿತು. ಆದರೆ ಪೊಲೀಸರು ಮಾತ್ರ ಹಲವು ಆಯಾಮಗಳಲ್ಲಿ ತನಿಖೆ ಮಾಡೋದಕ್ಕೆ ಶುರು ಮಾಡಿದ್ದರು.  ಆಗಲೇ ನೋಡಿ ಹಂತಕನ ಒಂದು ಸಣ್ಣ ಸುಳಿವು ಪೊಲೀಸರಿಗೆ ಸಿಗೋದು. ಸೂರ್ಯನ ಗೆಳತಿ​​​ ನಾಪತ್ತೆಯಾದಾಗ ಒಂದು ಟೀಂ ಅವಳ ಬೆನ್ನು ಬೀಳುತ್ತದೆ. ಅದೇ ಸಮಯದಲ್ಲಿ ಮತ್ತೊಂದು ಆಯಾಮದಲ್ಲಿ ತನಿಖೆ ಮಾಡೋದಕ್ಕೆ ಶುರು ಮಾಡ್ತಾರೆ. ಆಗ ಈ ಪ್ರಕರಣದಲ್ಲಿ ಶರತ್ ಎನ್ನುವ ವ್ಯಕ್ತಿ ಇರುವುದು ಗೊತ್ತಾಗುತ್ತದೆ.

ಇದನ್ನೂ ಓದಿ: ಬೆಂಗಳೂರು ಉದ್ಯಮಿ ಲೋಕನಾಥ್ ಸಿಂಗ್ ಉದ್ಯಮಿ ಕೇಸ್‌ನಲ್ಲಿ ಟ್ವಿಸ್ಟ್; ಹೆಣ್ಣು ಕೊಟ್ಟ ಅತ್ತೆಯಿಂದಲೇ ಸ್ಕೆಚ್?

ಇದೇ ಶರತ್ ರೌಡಿ ಸೂರ್ಯನನ್ನು ಕೊಲೆ ಮಾಡಿರಬೇಕು ಎಂದು ಪೊಲೀಸರು ಆತನನ್ನ ಎತ್ತಾಕೊಂಡು ಬರಲು ಮುಂದಾಗ್ತಾರೆ. ಆದರೆ ಆತ ಆಗ ಮತ್ತೊಂದು ಕೇಸಿ​ನಲ್ಲಿ ಜೈಲಿನಲ್ಲಿ ಇರುತ್ತಾನೆ. ಆತನ ಶಿಷ್ಯರನ್ನ ಹುಡುಕುತ್ತಾರೆ. ಅವರು ಸಿಕ್ಕಿದಾಗ ಎತ್ತಾಕೊಂಡು ಬಂದು ವರ್ಕ್​ ಮಾಡುತ್ತಾರೆ. ಆಗಲೇ ನೋಡಿ  ಸಿಕ್ಕಾಗಲೆಲ್ಲಾ ಮಾಂಜಾ ಕೊಡ್ತಿದ್ದ ಸೂರ್ಯನನ್ನ ಮುಗಿಸಲೇಬೇಕು ಅಂತ ಶರತ್​​ ಡಿಸೈಡ್​ ಮಾಡಿ, ತನ್ನದೇ ಹುಡುಗರಿಂದ ಕೊಲೆ ಮಾಡಿಸಿದ್ದ ಅನ್ನೋದು ಗೊತ್ತಾಗುತ್ತದೆ. 

ಮಾಡಬಾರದನ್ನ ಮಾಡಿದ್ರೆ ಆಗಬಾರದು ಅಗುತ್ತೆ ಅನ್ನೋದು ಇದಕ್ಕೇ ಇಲ್ವಾ. ಬದುಕಿರೋವರೆಗೂ ಯಾರಿಂದಲೂ ಒಳ್ಳೆಯವನು ಅಂತ ಅನ್ನಿಸಿಕೊಳ್ಳಲಿಲ್ಲ.. ಸಾಯುವಾಗಲೂ ಜೊತೆಯಲ್ಲಿ ಯಅರು ಇರಲಿಲ್ಲ.. ಇದು ಒಂದು ಬದುಕ ಅಂತ ಹೇಳಿಸಿಕೊಂಡೇ ಸೂರ್ಯ ಇವತ್ತು ಸತ್ತು ಹೋದ.

Read More...