ನಿಮ್ಮ ಮಕ್ಕಳು ಆನ್ಲೈನ್ ಗೇಮಿಂಗ್ ದಾಸರಾ? ಹಾಗಾದ್ರೆ ಈ ಸ್ಟೋರಿ ನೋಡಿ..!

  • ಆನ್ಲೈನ್‌ ಗೇಮ್‌ನಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಯುವಕ
  • ರಾಜಸ್ತಾನದ ಚಿತ್ತೊರಗಢದಲ್ಲಿ ಘಟನೆ
  • ಬೀದಿಯಲ್ಲಿ ಓಡಾಟ, ಹಿಡಿದು ಕಟ್ಟಿ ಹಾಕಿದ ಜನ

Share this Video
  • FB
  • Linkdin
  • Whatsapp

ಆನ್‌ಲೈನ್‌ ಗೇಮ್‌ಗೆ ದಾಸನಾಗಿದ್ದ ಯುವಕನೋರ್ವ ಮಾನಸಿಕ ಸ್ಥಿಮಿತ ಕಳೆದುಕೊಂಡು ಹೆದ್ದಾರಿಯಲ್ಲಿ ಓಡಲು ಶುರು ಮಾಡಿದ ಘಟನೆ ರಾಜಸ್ತಾನದ ಚಿತ್ತೊರಗಢದಲ್ಲಿ ನಡೆದಿದೆ. ರಸ್ತೆಯಲ್ಲಿ ಓಡುತ್ತಿದ್ದ ಆತನನ್ನು ಹಿಡಿದ ಸಾರ್ವಜನಿಕರು ಹಗ್ಗದಲ್ಲಿ ಕಟ್ಟಿ ಹಾಕಬೇಕಾದಂತಹ ದುಸ್ಥಿತಿ ನಿರ್ಮಾಣವಾಗಿತ್ತು. ಚಿತ್ತೋರ್‌ಗಢ(Chittorgarh) ಜಿಲ್ಲೆಯ ಬನ್ಸೆನ್‌ನಲ್ಲಿ(Bansen) ಇಂತಹ ಒಂದು ಪ್ರಕರಣ ಕಂಡುಬಂದಿದೆ. ಇಲ್ಲಿ ಆನ್‌ಲೈನ್ ಗೇಮ್‌ (online game) ವ್ಯಸನಕ್ಕೆ ಒಳಗಾದ ಯುವಕ ಮಾನಸಿಕವಾಗಿ ವಿಕಲಾಂಗ ಅವಸ್ಥೆಗೆ ತಲುಪಿದ್ದಾನೆ.'ಹ್ಯಾಕರ್-ಹ್ಯಾಕರ್', 'ಪಾಸ್ವರ್ಡ್ ಚೇಂಜ್' ಎಂದೆಲ್ಲಾ ಕೂಗುತ್ತಾ ಈತ ರಸ್ತೆಯಲ್ಲಿ ಓಡಾಡಿದ್ದಾನೆ. ಕೊನೆಗೆ ಯುವಕನನ್ನು ನಿಯಂತ್ರಿಸಲು ಹಗ್ಗದಿಂದ ಕಟ್ಟಿ ಹಾಕಬೇಕಾದ ಮಟ್ಟಕ್ಕೆ ಬಂದಿದೆ.

Related Video