Asianet Suvarna News Asianet Suvarna News

ಹೆಚ್‌ಎಎಲ್ ಹೆಲಿಕಾಪ್ಟರ್ ಘಟಕದ ಬಗ್ಗೆ ನಿಮಗೆಷ್ಟು ಗೊತ್ತು?: ಇಲ್ಲಿದೆ ಇಂಟ್ರೆಸ್ಟಿಂಗ್ ಸೀಕ್ರೆಟ್ಸ್

ದೇಶದ ಅತೀ ದೊಡ್ಡ ಹೆಲಿಕಾಪ್ಟರ್ ಉದ್ಘಾಟನಾ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಗುಬ್ಬಿಯ ಹೆಚ್‌ಎಎಲ್ ಹೆಲಿಕಾಪ್ಟರ್ ಘಟಕದ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ.

ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ರಕ್ಷಣಾ ಹೆಲಿಕಾಪ್ಟರ್‌ ಘಟಕ ಲೋಕಾರ್ಪಣೆಗೊಂಡಿದೆ. 20 ವರ್ಷದಲ್ಲಿ 1000 ಹೆಲಿಕಾಪ್ಟರ್‌ ತಯಾರಿಕೆಯು, ಒಟ್ಟು 4 ಲಕ್ಷ ಕೋಟಿ ರೂ. ವ್ಯವಹಾರ ಇಲ್ಲಿ ನಡೆಯುತ್ತೆ‌ ಗುಬ್ಬಿ ತಾಲೂಕು ಬಿದರಿಳ್ಳದಲ್ಲಿ ಎಚ್‌ಎಎಲ್‌ ಘಟಕ ಲೋಕಾರ್ಪಣೆ ಆಗಿದ್ದು, ದೇಶದ ಅತಿ ದೊಡ್ಡ ಹೆಲಿಕಾಪ್ಟರ್‌ ಘಟಕ ಇದಾಗಿದೆ. 615 ಎಕರೆ ಪ್ರದೇಶದಲ್ಲಿ ಘಟಕ ನಿರ್ಮಾಣವಾಗಿದ್ದು, 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಡಿಗಲ್ಲು ಹಾಕಿದ್ದರು. 5,300 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರು ಈ ಘಟಕವು, ಆರಂಭದಲ್ಲಿ ಲಘು ಯುದ್ಧ ಹೆಲಿಕಾಪ್ಟರ್‌ಗಳ ತಯಾರಿಕೆ ಮಾಡಲಿದೆ. ವರ್ಷಕ್ಕೆ 60 ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು ತಯಾರಿಸಲಿದ್ದು, ಹಂತ ಹಂತವಾಗಿ 3-15 ಟನ್ ಗಾತ್ರದ ಹೆಲಿಕಾಪ್ಟರ್‌ ತಯಾರಿಕೆಯ ಗುರಿ ಹೊಂದಲಾಗಿದೆ.