ಬಿಎಂಟಿಸಿ ನಿಗಮದಲ್ಲಿ ಆಡಿದ್ದೇ ಆಟ: ನ್ಯಾಯ ಕೇಳಿದ ಡ್ರೈವರ್ ಸಸ್ಪೆಂಡ್

ಇತ್ತೀಚಿನ ದಿನಗಳಲ್ಲಿ ಅನ್ಯಾಯ ಆದ್ರೆ ಪ್ರಶ್ನಿಸೋದು ತಪ್ಪು ಎಂಬಂತಾಗಿದೆ. ನ್ಯಾಯ ಕೇಳಿದ ಅಮಾಯಕನಿಗೆ ಸಸ್ಪೆಂಡ್‌ ಶಿಕ್ಷೆ ಸಿಕ್ಕಿದೆ.
 

Share this Video
  • FB
  • Linkdin
  • Whatsapp

ಬಿಎಂಟಿಸಿ ನಿಗಮದಲ್ಲಿ ಹಿಟ್ಲರ್‌ ಆಡಳಿತ ನಡಿತಾ ಇದೆಯಾ ಎಂಬ ಪ್ರಶ್ನೆ ಮೂಡಿದೆ. ಬಿಎಂಟಿಸಿ ಎಂಡಿ ಸಹಿ ನಕಲು ಮಾಡಿದವರಿಗೆ ಕೇವಲ ಟ್ರಾನ್ಸ್‌ಫರ್‌, ಆದ್ರೆ ನ್ಯಾಯ ಕೇಳಿದ ಬಿಎಂಟಿಸಿ ಬಸ್‌ ಡ್ರೈವರ್‌ ತ್ಯಾಗರಾಜ್‌ ಅವರನ್ನು ಸಸ್ಪೆಂಡ್‌ ಮಾಡಲಾಗಿದೆ. ಬಿಎಂಟಿಸಿ ಅಕ್ರಮಗಳ ಬಗ್ಗೆ ದಾಖಲೆ ಸಮೇತ ಎಂಡಿ ಸತ್ಯವತಿಗೆ ದೂರು ನೀಡಿದ್ರೂ, ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಾಗಿದ್ದಾರೆ. ಇನ್ನು ರಾಜ್ಯಪಾಲರಿಗೆ ಪತ್ರ ಬರೆದು ನ್ಯಾಯ ಕೇಳಿದಕ್ಕೆ ತ್ಯಾಗರಾಜ್‌ ಸಸ್ಪೆಂಡ್‌ ಆಗಿದ್ದಾರೆ. ರಾಜ್ಯಪಾಲರಿಗೆ ಪತ್ರ ಬರೆದಿದ್ದಕ್ಕೆ ಸಸ್ಪೆಂಡ್‌ ಎಂದು ಎಂಡಿ ಕಾರಣ ಕೊಟ್ಟಿದ್ದಾರೆ.

Related Video