Asianet Suvarna News Asianet Suvarna News

Yadgir: ಯಾದಗಿರಿಯಲ್ಲಿ ಕುಡಿಯಲು 'ಶುದ್ಧ' ನೀರಿಲ್ಲ: ಹೆಸರಿಗೆ ಸೀಮಿತ ಆರ್.ಓ ಪ್ಲಾಂಟ್ಸ್

ಯಾದಗಿರಿ ಜಿಲ್ಲೆಯಲ್ಲಿ ಹೆಸರಿಗೆ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದು, ಹಲವಾರು ಕಡೆ ಕೆಟ್ಟು ಹೋಗಿವೆ.
 

ಯಾದಗಿರಿ: ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಜನರಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದೆ. ಆದ್ರೆ ಜನರಿಗೆ ಶುದ್ಧ ಕುಡಿಯುವ ನೀರು ಮಾತ್ರ ಮರಿಚಿಕೆಯಾಗಿದೆ. ಯಾದಗಿರಿ ಜಿಲ್ಲೆಯ ಹುಲಕಲ್, ಗುರುಸಣಗಿ, ಯರಗೋಳ ಸೇರಿದಂತೆ ಮೊದಲಾದ ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್ ಆಗಿವೆ. ನೀರಿನ ಘಟಕಗಳು ಅಳವಡಿಕೆ ಮಾಡಿ ಅಧಿಕಾರಿಗಳು ಶುದ್ಧ ನೀರು ಪೂರೈಕೆ ಮಾಡದೇ ಬೇಜಾವಾಬ್ದಾರಿ ಮೆರೆದಿದ್ದಾರೆ. ಜಿಲ್ಲೆಯಲ್ಲಿ 415 ಶುದ್ಧ ಕುಡಿಯುವ ನೀರಿನ ಘಟಕಗಳು ಇವೆ. ಅದರಲ್ಲಿ 38 ಹಾಳಾಗಿ ಹೋಗಿದ್ದು, 96 ಘಟಕಗಳು ದುರಸ್ತಿ ಮಾಡದೇ ಬಂದ್ ಆಗಿವೆ. ಹಲವು ಗ್ರಾಮೀಣ ಭಾಗದಲ್ಲಿ ಕೇವಲ ನೋಡುವುದಕ್ಕೆ ಮಾತ್ರ ಕುಡಿಯುವ ನೀರಿನ ಘಟಕಗಳು ಸೀಮಿತವಾಗಿವೆ.

ಗೂಗಲ್ ಪೇ, ಪೇಟಿಎಂ ವಹಿವಾಟುಗಳಿಗೆ ಕಡಿವಾಣ ಬೀಳಲಿದೆಯಾ? ಶೀಘ್ರದಲ್ಲೇ ಯುಪಿಐ ಪಾವತಿ ಆ್ಯಪ್ ಗಳ ವಹಿವಾಟಿಗೆ ಮಿತಿ

Video Top Stories