ಅಗ್ನಿಪಥ್ ಜಾರಿಗೆ ಮೊದಲೇ ಚಿಂತನೆ ನಡೆಸಿಲ್ಲವೇ? ರಾಜನಾಥ್ ಸಿಂಗ್ ಹೇಳಿದ್ದೇನು?
ಭಾರತದ ರಕ್ಷಣಾ ಪಡೆಗಳಾದ ಭೂ ಸೇನೆ ವಾಯುಸೇನೆ ಹಾಗೂ ನೌಕಾಪಡೆಗೆ ಸಿಬ್ಬಂದಿಯನ್ನು ನೇಮಕ ಮಾಡುವ ಹೊಸ ನೇಮಕಾತಿ ಯೋಜನೆ ಅಗ್ನಿಪಥ್‌ಗೆ ಸಂಬಂಧಿಸಿದಂತೆ ದೇಶಾದ್ಯಂತ ಯುವಕರು ಪ್ರತಿಭಟನೆ ನಡೆಸುತ್ತಿದ್ದು, ಹಲವೆಡೆ ಹಿಂಸಾಚಾರ ನಡೆದಿದೆ.
ಭಾರತದ ರಕ್ಷಣಾ ಪಡೆಗಳಾದ ಭೂ ಸೇನೆ ವಾಯುಸೇನೆ ಹಾಗೂ ನೌಕಾಪಡೆಗೆ ಸಿಬ್ಬಂದಿಯನ್ನು ನೇಮಕ ಮಾಡುವ ಹೊಸ ನೇಮಕಾತಿ ಯೋಜನೆ ಅಗ್ನಿಪಥ್‌ಗೆ ಸಂಬಂಧಿಸಿದಂತೆ ದೇಶಾದ್ಯಂತ ಯುವಕರು ಪ್ರತಿಭಟನೆ ನಡೆಸುತ್ತಿದ್ದು, ಹಲವೆಡೆ ಹಿಂಸಾಚಾರ ನಡೆದಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರ ಜೂನ್ 14 ರಂದು ಘೋಷಣೆ ಮಾಡಿತ್ತು. ಆದರೆ ಈ ಯೋಜನೆಯನ್ನು ಘೋಷಣೆ ಮಾಡುವ ಮೊದಲು ಸರ್ಕಾರ ಯಾವುದೇ ಸಿದ್ಧತೆ ನಡೆಸಿರಲಿಲ್ಲವೇ ಎಂಬ ಪ್ರಶ್ನೆ ಮೂಡಿತ್ತು. ಆದರೆ ಯೋಜನೆಯ ಪ್ರಕಾರವೇ ಇದು ಕಾರ್ಯರೂಪಕ್ಕೆ ಬಂದಿದೆ. ಇದರ ಹಿಂದೆ ಯಾವುದೇ ಒತ್ತಡ ಇಲ್ಲ. ಇನ್ನಷ್ಟು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿದ್ದೇವೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.