ಮೋದಿಯ ಉತ್ತರಾಧಿಕಾರಿ ರೇಸಲ್ಲಿ 3 ನಾಯಕರು: ಭಾರತೀಯರ ಆಯ್ಕೆ ಯಾರು..?

2024ರ ಚುನಾವಣೆಯಲ್ಲಿ ಬಿಜೆಪಿ ಪರ ಮೋದಿ ಪ್ರಧಾನಿಯಾಗದಿದ್ದರೆ ಅವರ ಉತ್ತರಾಧಿಕಾರಿ ಯಾರು ಎನ್ನುವುದಕ್ಕೆ ಜನರು ಕೇಸರಿ ಪಕ್ಷದ ಮೂವರು ನಾಯಕರ ಹೆಸರು ನೀಡಿದ್ದಾರೆ. ಅವರು ಯಾರು ಗೊತ್ತಾ..? ಉತ್ತರ ಇಲ್ಲಿದೆ.. 

Share this Video
  • FB
  • Linkdin
  • Whatsapp

ಪ್ರಧಾನಿ ಮೋದಿ ದೇಶದ ಜನಪ್ರಿಯ ಪ್ರಧಾನ ಮಂತ್ರಿಗಳಲ್ಲಿ ಒಬ್ಬರಾಗಿದ್ದಾರೆ. ಅಲ್ಲದೆ, 2024 ರ ಲೋಕಸಭೆ ಚುನಾವಣೆಯ ನಂತರವೂ ಮೋದಿಯೇ ಪ್ರಧಾನಿಯಾಗಿರಲಿದ್ದಾರೆ ಎಂದು ಕೆಲ ಸಮೀಕಷ್ಎಗಳು ಹೇಳುತ್ತಿವೆ. ಆದರೂ, ಮೋದಿಯ ನಂತರ ಬಿಜೆಪಿಯಲ್ಲಿ ಉತ್ತರಾಧಿಕಾರಿಗಳು ಯಾರು..? ಜನರು ಆಯ್ಕೆ ಯಾವುದು ಎಂಬ ಪ್ರಶ್ನೆಗೆ ಉತ್ತರ ಏನು ಗೊತ್ತಾ..? ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಹಾಗೂ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ. ಅಮಿತ್‌ ಶಾ ನಂ. 1 ಆಯ್ಕೆಯಾಗಿದ್ದರೆ, ಯೋಗಿ ಎರಡನೇ ಉತ್ತಮ ಆಯ್ಕೆ ಹಾಗೂ ಗಡ್ಕರಿಗೆ ಮೂರನೇ ಸ್ಥಾನ ಎಂದು ಹೇಳಲಾಗಿದೆ. 

Related Video