Karnataka Bandh: ಸ್ಯಾಂಡಲ್‌ವುಡ್‌ನಿಂದ ನೈತಿಕ ಬೆಂಬಲ, ಲವ್ ಯೂ ರಚ್ಚು, ಅರ್ಜುನ್ ಗೌಡ ಸಿನಿಮಾ ರಿಲೀಸ್

ಎಂಇಎಸ್ ದುಂಡಾವರ್ತನೆ ಖಂಡಿಸಿ, ಎಂಇಎಸ್‌ನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಇದೇ ಡಿ. 31 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 24): ಎಂಇಎಸ್ ದುಂಡಾವರ್ತನೆ ಖಂಡಿಸಿ, ಎಂಇಎಸ್‌ನ್ನು (MES) ನಿಷೇಧಿಸಬೇಕೆಂದು ಆಗ್ರಹಿಸಿ ಇದೇ ಡಿ. 31 ರಂದು ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಲಾಗಿದೆ. 

'ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ನೀಡುವುದಾಗಿ ಫಿಲ್ಮ್‌ ಛೇಂಬರ್‌ನಲ್ಲಿಂದು ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಎಂದಿನಂತೆ ನಡೆಯುತ್ತದೆ. ಚಿತ್ರೀಕರಣ ಸ್ಥಗಿತ ಇಲ್ಲ. ಕನ್ನಡದ ಪರವಾಗಿ ನಮ್ಮ ಬೆಂಬಲ ಸದಾ ಇರುತ್ತೆ' ಎಂದು ಫಿಲ್ಮ್ ಚೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್ ಹೇಳಿದರು. 

Karnataka Bandh: ಸ್ಯಾಂಡಲ್‌ವುಡ್‌ನಿಂದ ನೈತಿಕ ಬೆಂಬಲ ಬೇಡ, ನೀವು ಕನ್ನಡಿಗರಲ್ವೇನ್ರಿ..? ಸಾರಾ ಗೋವಿಂದು

'ಡಿ. 31 ಕ್ಕೆ ಸಿನಿಮಾ ಥಿಯೇಟರ್ ಬಂದ್ ಇಲ್ಲ, ನಿಗದಿಯಂತೆ ಡಿ. 31 ಕ್ಕೆ ಲವ್ ಯೂ ರಚ್ಚು, ಅರ್ಜುನ್ ಗೌಡ ಸಿನಿಮಾ ರಿಲೀಸ್ ಆಗುತ್ತೆ. ಈಗಿನ ಪರಿಸ್ಥಿತಿಯಲ್ಲಿ ಸಿನಿಮಾ ಚಟುವಟಿಕೆಗಳು ನಿಂತರೆ ಕಷ್ಟವಾಗುತ್ತದೆ' ಎಂದು ಉಮೇಶ್ ಬಣಕಾರ್ ಹೇಳಿದ್ದಾರೆ. 

Related Video