ಯುವದಸರಾ ವೇದಿಕೆಯಲ್ಲೇ ನಿವೇದಿತಾಗೆ ಚಂದನ್ ಶೆಟ್ಟಿ ಪ್ರಪೋಸ್.. ವಿಡಿಯೋ

ಮೈಸೂರು[ಅ. 05] ಯುವದಸರಾದಲ್ಲಿ ಬಿಗ್ ಬಾಸ್ ಜೋಡಿಯ ಲವ್ ಪ್ರಪೋಸ್ ಸ್ಟೋರಿ ಹೇಳ್ತೆವೆ ಕೇಳಿ. ಕನ್ನಡ ರ‌್ಯಾಪರ್ ಚಂದನ್ ಶೆಟ್ಟಿ ತಮ್ಮ ಗೆಳತಿ, ಪ್ರೇಯಸಿ ನಿವೇದಿತಾ ಗೌಡರನ್ನು ಮದುವೆಯಾಗುತ್ತೇನೆ ಎಂದು ಅಧಿಕೃತವಾಗಿ ಹೇಳಿದ್ದು ವೇದಿಕೆಯ ಮೇಲೆ ರಿಂಗ್ ತೊಡಿಸಿ ಪ್ರಪೋಸ್ ಮಾಡಿದ್ದಾರೆ.  ಯುವದಸರಾದಲ್ಲಿ ಯುವ ಜೋಡಿ ಒಂದಾಗಿದೆ. ನೆರೆದಿದ್ದ ಪ್ರೇಕ್ಷಕರ ನಡುವೇಯೆ ನಿವೇದಿತಾಗೆ ಪ್ರಪೋಸ್ ಮಾಡಿದ ಚಂದನ್ ಸರ್ ಪ್ರೈಸ್ ಗೆ ನಿವೇದಿತಾ ಒಂದು ಕ್ಷಣ ಶಾಕ್ ಆಗಿಹೋಗಿದ್ದಾರೆ.

Share this Video
  • FB
  • Linkdin
  • Whatsapp

ಮೈಸೂರು[ಅ. 05] ಯುವದಸರಾದಲ್ಲಿ ಬಿಗ್ ಬಾಸ್ ಜೋಡಿಯ ಲವ್ ಪ್ರಪೋಸ್ ಸ್ಟೋರಿ ಹೇಳುತ್ತೇವೆ ಕೇಳಿ. ಕನ್ನಡ ರ‌್ಯಾಪರ್ ಚಂದನ್ ಶೆಟ್ಟಿ ತಮ್ಮ ಗೆಳತಿ, ಪ್ರೇಯಸಿ ನಿವೇದಿತಾ ಗೌಡರನ್ನು ಮದುವೆಯಾಗುತ್ತೇನೆ ಎಂದು ಅಧಿಕೃತವಾಗಿ ಹೇಳಿದ್ದು ವೇದಿಕೆಯ ಮೇಲೆ ರಿಂಗ್ ತೊಡಿಸಿ ಪ್ರಪೋಸ್ ಮಾಡಿದ್ದಾರೆ. ಯುವದಸರಾದಲ್ಲಿ ಯುವ ಜೋಡಿ ಒಂದಾಗಿದೆ.ನೆರೆದಿದ್ದ ಪ್ರೇಕ್ಷಕರ ನಡುವಿನಲ್ಲೇ ಪ್ರಪೋಸ್ ಮಾಡಿದ ಚಂದನ್ ಸರ್ ಪ್ರೈಸ್ ಗೆ ನಿವೇದಿತಾ ಒಂದು ಕ್ಷಣ ಶಾಕ್ ಆಗಿಹೋಗಿದ್ದಾರೆ. 

Add Asianetnews Kannada as a Preferred SourcegooglePreferred

ಚಂದನ್ ಪ್ರಪೋಸ್ ನಂತರ ವೇದಿಕೆ ಮೇಲೆ ಲವ್ ಯೂ ಸೋ ಮಚ್ ಎಂದು ಹೇಳಿದ ನಿವೇದಿತಾ ಗೌಡ ತಮ್ಮ ಒಪ್ಪಿಗೆ ಸೂಚಿಸಿದ್ದಾರೆ. ಎಲ್ಲರ ಮುಂದೆ ಎಂಗೆಜ್ ಆಗಿದ್ದೇವೆ. ನಿಮ್ಮ ಆಶೀರ್ವಾದ ಇರಲಿ, ಆದಷ್ಟು ಬೇಗ ಮದುವೆ ಆಗುತ್ತೇವೆ ಎಂದು ಚಂದನ್ ಸಂಭ್ರಮ ಹಂಚಿಕೊಂಡಿದ್ದಾರೆ.

‘ಬಿಗ್ ಬಾಸ್ ಮನೆಯಲ್ಲಿ ಒಟ್ಟಿಗೆ ಇದ್ವಿ, ಫ್ರೆಂಡ್ಸ್ ಆದ್ವಿ ಹೊರಗೆ ಬಂದ್ಮೆಲೆ ಮತ್ತಷ್ಟು ಕ್ಲೂಸ್ ಆದ್ವಿ ಆಮೇಲೆ ಇಬ್ಬರು ಅರ್ಥ ಮಾಡ್ಕೊಂಡ್ವಿ ಈ ರೀತಿ ಪ್ರಪೋಸ್ ಮಾಡ್ತಾನೆ ಅಂತ ಗೆಸ್ ಮಾಡಿರಲಿಲ್ಲ, ರಿಯಲಿ ಐ ಲವ್ ಇಟ್’ ಎಂದು ನಿವೇದಿತಾ ಹೇಳಿದ್ದಾರೆ.

ಚಂದನ್ ಗೆ ಮನಸಿನ ಮಾತು ಹೇಳಿದ ನಿವೇದಿತಾ

Related Video