ಬೆಂಗಳೂರು : ಬಿಗ್ ಬಾಸ್ ಸೀಸನ್ 5ರಲ್ಲಿ ಸ್ಪರ್ಧಿಯಾಗಿದ್ದ ನಿವೇದಿತಾ ಗೌಡ ಗೆಳೆಯ ಚಂದನ್ ಶೆಟ್ಟಿಗೆ ಕಾಫಿ ಮಗ್ ಕೊಟ್ಟು ತಮ್ಮ ಭಾವನೆಯನ್ನು ಹೇಳಿಕೊಂಡಿದ್ದಾರೆ. 

ನಿವೇದಿತಾ ಚಂದನ್ ಗೆ ಕಾಫಿ ಮಗ್ ಕಳಿಸಿದ್ದು, ಅದರ ಮೇಲೆ ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನೀನು ನನ್ನ ಜೊತೆಯೇ ಇರಬೇಕು ಎಂದು ನಾನು ಬಯಸುತ್ತೇನೆ. ಇಂತಿ ನಿನ್ನ ಪ್ರೀತಿಯ ನಿವಿ ಎಂದು ಬರೆದಿದ್ದಾರೆ. 

ನಿವೇದಿತಾ ನೀಡಿದ ಮಗ್ ಫೊಟೊವನ್ನು ಚಂದನ್ ತಮ್ಮ  ಇನ್ ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದು, ನಾನು ನಿನ್ನನ್ನ ಮಿಸ್ ಮಾಡಿಕೊಳ್ಳುತ್ತೇನೆ ನಿವಿ ಎಂದು ಬರೆದುಕೊಂಡಿದ್ದಾರೆ.