ಬೆಂಗಳೂರು ರೇವ್ ಪಾರ್ಟಿ: ಟಾಲಿವುಡ್‌ ಸುಪ್ರಸಿದ್ಧ ನಟಿಯ ತಮ್ಮನಿಗೆ ಪೊಲೀಸರಿಂದ ಗಾಳ

ಇನ್ನು ರಾಜಧಾನಿಯ ಪಂಚತಾರಾ ಹೋಟೆಲ್‌ನ ಮೇಲೆ ದಾಳಿ ನಡೆಸಿ ವೀಕೆಂಡ್‌ ಪಾರ್ಟಿಯಲ್ಲಿ ಡ್ರಗ್ಸ್‌ ಸೇವಿಸಿದ ಆರೋಪದ ಮೇರೆಗೆ ಬಾಲಿವುಡ್‌ನ ಖ್ಯಾತ ಖಳನಟ ಶಕ್ತಿ ಕಪೂರ್‌ ಪುತ್ರ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬುವುದು ಉಲ್ಲೇಖನೀಯ.

Share this Video
  • FB
  • Linkdin
  • Whatsapp

ಬೆಂಗಳೂರು(ಜೂ.14): ಬೆಂಗಳೂರು ಡ್ರಗ್ಸ್‌ ಕೆಸ್‌ನಲ್ಲಿ ಮತ್ತೊಬ್ಬ ಸೆಲೆಬ್ರಿಟಿಗೆ ಸಂಕಷ್ಟ ಬಂದೊದಗಿದೆ. ಬಾಲಿವುಡ್‌ನಿಂದ ಈ ಜಾಲ ಈಗ ಟಾಲಿವುಡ್‌ಗೂ ಹರಡಿರುವ ಶಂಕೆ ವ್ಯಕ್ತವಾಗಿದೆ. ಹೌದು ಟಾಲಿವುಡ್‌ನ ಸುಪ್ರಸಿದ್ಧ ನಟಿಯ ತಮ್ಮ ನಿಶಾಂತ್‌ಗಾಗಿ ಪೊಲೀಸರು ಶೋಧ ಆರಂಭವಾಗಿದೆ.

Add Asianetnews Kannada as a Preferred SourcegooglePreferred

ಇನ್ನು ರಾಜಧಾನಿಯ ಪಂಚತಾರಾ ಹೋಟೆಲ್‌ನ ಮೇಲೆ ದಾಳಿ ನಡೆಸಿ ವೀಕೆಂಡ್‌ ಪಾರ್ಟಿಯಲ್ಲಿ ಡ್ರಗ್ಸ್‌ ಸೇವಿಸಿದ ಆರೋಪದ ಮೇರೆಗೆ ಬಾಲಿವುಡ್‌ನ ಖ್ಯಾತ ಖಳನಟ ಶಕ್ತಿ ಕಪೂರ್‌ ಪುತ್ರ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬುವುದು ಉಲ್ಲೇಖನೀಯ.

ಬಾಲಿವುಡ್‌ನ ಹಿರಿಯ ನಟ ಶಕ್ತಿ ಕಪೂರ್‌ ಪುತ್ರ ಹಾಗೂ ನಟ ಸಿದ್ಧಾಂತ್‌ ಕಪೂರ್‌ (38), ಅಖಿಲ್‌ ಸೋನಿ (28), ಹರ್ಜೋತ್‌ ಸಿಂಗ್‌ (28), ಅಖಿಲ್‌ (23) ಹಾಗೂ ಹನಿ (25) ಬಂಧಿತರು. ಎಂ.ಜಿ.ರಸ್ತೆ ಟ್ರಿನಿಟಿ ವೃತ್ತ ಸಮೀಪದ ‘ದಿ ಪಾರ್ಕ್’ ಹೋಟೆಲ್‌ ಮೇಲೆ ಭಾನುವಾರ ತಡರಾತ್ರಿ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ 2 ಪೊಟ್ಟಣ ಗಾಂಜಾ ಮತ್ತು 7 ಎಂಡಿಎಂಎ ಮಾತ್ರೆಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Video