ಇದು ಜೀವ ಝಲ್ ಅನ್ನಿಸುವ ಗಟ್ಟಿಗಿತ್ತಿಯ ಸರ್ಕಸ್: ಕಿಟಕಿಯಿಂದ ಬಸ್ ಒಳಗೆ ಯುವತಿ ಎಂಟ್ರಿಯಾಗಿದ್ದು ಹೇಗೆ ಗೊತ್ತಾ?

ಹೆಣ್ಣುಮಕ್ಕಳು ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ತಾಕತ್ತು ಏನು ಅನ್ನುವದನ್ನು ತೋರಿಸುತ್ತಿದ್ದಾರೆ. 

First Published Jan 14, 2023, 1:56 PM IST | Last Updated Jan 14, 2023, 1:56 PM IST

ಹೆಣ್ಣು ಮಕ್ಕಳು ಹುಡುಗರಿಗಿಂತ ಕಡಿಮೆ ಇಲ್ಲ ಎನ್ನುವುದಕ್ಕೆ ಈ ಗಟ್ಟಿಗಿತ್ತಿ ಸಾಕ್ಷಿ. ಅದು ಜನರಿಂದ ತುಂಬಿ ತುಳುಕುತ್ತಿರುವ ಬಸ್‌. ಒಂದೇ ಒಂದು ಹೆಜ್ಜೆ ಇಡಲು ಸರ್ಕಸ್‌ ಮಾಡಬೇಕಾಗಿತ್ತು. ಗಂಡ ಹೈಕ್ಳು ಬಸ್‌ ಡೋರ್‌ ಅಲ್ಲೇ ಜೋತಾಡುತ್ತಿದ್ದರು. ಅಲ್ಲೆ ಇದ್ದ ಗಟ್ಟಿಗಿತ್ತಿಯೊಬ್ಬಳು ಕಿಟಕಿಯಿಂದ ಬಸ್ ಒಳಗೆ ಎಂಟ್ರಿ ಕೊಟ್ಟಿದ್ದಾಳೆ. ಗಂಡು ಮಕ್ಕಳು ಕೂಡಾ ಇಂತಹ ಸರ್ಕಸ್‌ ಮಾಡಲು 2 ನಿಮಿಷ ಯೋಚನೆ ಮಾಡಬೇಕು. ಬಸ್‌ ಹೋರಡ್ತಾ ಇದ್ರು ಕಿಟಕಿಯೊಳಗೆ ಒಂದು ಕಾಲು ಇಟ್ಟಳು. ಜನರು ಇದು ಏನ್‌ ಆಗ್ತಿದೆ ಎಂದು ನೋಡುತ್ತಾ ಇರುವಾಗಲೇ ಇನ್ನೊಂದು ಕಾಲು ಒಳಗೆ ಇಟ್ಟು ಬಸ್‌ ಒಳಗೆ ಎಂಟ್ರಿ ಆಗೇ ಬಿಟ್ಟಿದ್ದಳು. ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ವೈರಲ್‌ ಆಗಿದೆ.

BIG 3: ಶಿಕ್ಷಣದ ಕ್ರಾಂತಿ, ಬಡವರ ಸೇವೆ ಹಾಗೂ ಬಿಸಿಲು ಮ್ಯಾನ್: ಇಲ್ಲಿದ್ದಾರೆ ರಿಯಲ್ ಹೀರೋಗಳು